ಜನಸಾಮಾನ್ಯರ ಜೊತೆ ಬೆರೆತ ರಾಜಕಾರಣಿ ಗೋಪಾಲ ಭಂಡಾರಿ:ಎಂ.ಎ. ಗಫೂರ್‌

ಉಡುಪಿ:  ಜಾತ್ಯತೀತತೆಗೆಹೆಚ್ಚಿನ ಒತ್ತು ನೀಡಿದ್ದ ಗೋಪಾಲ ಭಂಡಾರಿ ಅವರು, ಸದಾ ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದರು ಈ ಮೂಲಕ ಜನಸಾಮಾನ್ಯರ ರಾಜಕಾರಣಿಯಾದರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್‌ ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಶನಿವಾರ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಭಂಡಾರಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು.

ಭಂಡಾರಿಯವರು ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ಶುದ್ಧ ಮನಸ್ಸಿನೊಂದಿಗೆ ಎಲ್ಲರ ಜತೆಗೆ ಬೆರೆತರೆ ನಮ್ಮ ಬದುಕು ುಂದರವಾಗುತ್ತದೆ ಎಂದವರು ನಂಬಿದ್ದರು ಎಂದರು.
 ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮಾತನಾಡಿ, ಗೋಪಾಲ ಭಂಡಾರಿ ನನ್ನ ಬದಲು ಅವರು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾಗಬೇಕಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿ ನನ್ನ ಹೆಸರನ್ನು ಸೂಚಿಸಿದರು ಎಂದರು.
ಕಾಂಗ್ರೆಸ್‌ ಮಹಿಳಾ ನಾಯಕಿ ಶ್ಯಾಮಲಾ ಭಂಡಾರಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ
ಭುಜಂಗ ಶೆಟ್ಟಿ, ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ಜರ್ನಾದನ ತೋನ್ಸೆ ನುಡಿ ನಮನ
ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವರೋನಿಕಾ ಕರ್ನೆಲಿಯೋ, ಉಡುಪಿ ಬ್ಲಾಕ್‌
ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮಿನ್‌ ಪಡುಕೆರೆ, ಮುಖಂಡರಾದ ನರಸಿಂಹಮೂರ್ತಿ,ಶಬ್ಬೀರ್‌ ಉಡುಪಿ, ಲೂವಿಸ್‌ ಲೋಬೊ, ರೋಶಿನಿ ಒಲಿವೇರಾ, ಡಾ. ಸುನೀತಾ ಶೆಟ್ಟಿ,ಉದ್ಯಾವರ ನಾಗೇಶ್‌ ಕುಮಾರ್‌, ಚಂದ್ರಿಕಾ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ,ಇಗ್ನೇಶಿಯಸ್‌ ಡಿಸೋಜ,ರಿಯಾಝ್‌ ಪಳ್ಳಿ, ದಿವಾಕರ ಕುಂದರ್‌, ರಾಘವ ದೇವಾಡಿಗ, ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಹರೀಶ್‌ ಕಿಣಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.