ವಿದ್ಯಾರ್ಥಿ ಜೀವನದಲ್ಲಿ ನೈತಿಕ ಮೌಲ್ಯ ಅಳವಡಿಸಿಕೊಳ್ಳಲು ಎನ್.ಎಸ್.ಎಸ್ ಸಹಕಾರಿ: ಡಾ. ಗಣನಾಥ ಎಕ್ಕಾರು

ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವ, ಸಹಕಾರ, ಸಹಬಾಳ್ವೆ ಮುಂತಾದ ಜೀವನದ ನೈತಿಕ ಮೌಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಲು ಎನ್. ಎಸ್. ಎಸ್ ಸಹಕಾರಿಯಾಗುತ್ತದೆ ಎಂದು ನಿಕಟ ಪೂರ್ವ ರಾಷ್ಟ್ರೀಯ ಸೇವಾ ಯೋಜನಾ ಸಂಪರ್ಕಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಹೇಳಿದರು.

ನಗರದ ಡಾ. ಜಿ. ಶಂಕರ್. ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಯು. ಜಿ. ಸ್ ಸಭಾಂಗಣದಲ್ಲಿ ಮಂಗಳವಾರ ಎನ್.ಎಸ್.ಎಸ್ ಘಟಕ-1 ಮತ್ತು ಘಟಕ-2 ರ ಪ್ರಸ್ತುತ ಶೈಕ್ಷಣಿಕ ಸಾಲಿನ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಎನ್. ಎಸ್. ಎಸ್, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಸಂವಹನ ಕಲೆ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್. ಎಸ್. ಶೆಟ್ಟಿ, ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯತೇರ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಸಮುದಾಯದ ಜೊತೆಗಿನ ಸಂಬಂಧಗಳ ಅರಿವು ಮೂಡುತ್ತದೆ. ಸಾಧನೆಯ ಜೊತೆ ಸಮಾಜ ಸೇವೆಯ ಮನಸ್ಸಿದ್ದರೆ ಮಾತ್ರ ಒಬ್ಬ ಪ್ರಜ್ಞಾವಂತ ನಾಗರಿಕನಾಗಬಹುದು ಎಂದರು.

ಇದೇ ಸಂದರ್ಭದಲ್ಲಿ ಎನ್. ಎಸ್. ಎಸ್. ಘಟಕ 1 ಮತ್ತು 2 ರ ಸ್ವಯಂ ಸೇವಕ ವಿದ್ಯಾರ್ಥಿನಿಯರಿಗೆ ಅಭಿವಿನ್ಯಾಸ ಕಾರ್ಯಕ್ರಮವು ನಡೆಯಿತು.

ಕಾಲೇಜಿನ ಐ.ಕ್ಯೂ.ಏ.ಸಿ ಸಂಚಾಲಕ ಸೋಜನ್.ಕೆ.ಜಿ ಉಪಸ್ಥಿತರಿದ್ದರು.

ಕಾಲೇಜಿನ ಎನ್. ಎಸ್. ಎಸ್. ಘಟಕ-1 ರ ಯೋಜನಾಧಿಕಾರಿ ಪ್ರೊ. ನಿಕೇತನ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕ-2 ರ ಯೋಜನಾಧಿಕಾರಿ ವಿದ್ಯಾ. ಡಿ. ಅತಿಥಿಯನ್ನು ಪರಿಚಯಿಸಿದರು. ಕುಮಾರಿ ಸಿಂಚನ ಸ್ವಾಗತಿಸಿ, ಎನ್. ಎಸ್. ಎಸ್. ಘಟಕದ ನಾಯಕಿ ಪ್ರೀತಿ ವಂದಿಸಿದರು.