ಅಪರಿಚಿತ ನಂಬರ್ನಿಂದ ಕರೆ ಬಂದಾಗ ಅದು ಯಾರದ್ದು, ವಂಚನೆಯ ಕರೆ ಇರಬಹುದೇ ಎಂಬ ಆತಂಕ ಸಾಮಾನ್ಯ. ಆದರೆ ಇಂತಹ ಗೊಂದಲಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP) ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.
ದೂರಸಂಪರ್ಕ ಇಲಾಖೆ (DoT) 2026ರ ನವೆಂಬರ್ 1ರಿಂದ ಈ ವ್ಯವಸ್ಥೆ ಜಾರಿಗೊಳಿಸುವಂತೆ ಟೆಲಿಕಾಂ ಸೇವಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.
ಏನಿದು ಸಿಎನ್ಎಪಿ?
ಕಾಲಿಂಗ್ ನೇಮ್ ಪ್ರೆಸೆಂಟೇಶನ್ ಎಂಬುದು ಮೊಬೈಲ್ಗೆ ಕರೆ ಮಾಡಿದವರ ಹೆಸರನ್ನು ಪರದೆಯ ಮೇಲೆ ತೋರಿಸುವ ಟೆಲಿಕಾಂ ವ್ಯವಸ್ಥೆ. ಟ್ರೂಕಾಲರ್ನಂತೆ ಪ್ರತ್ಯೇಕ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಅಗತ್ಯವಿಲ್ಲ. ಟೆಲಿಕಾಂ ಕಂಪನಿಗಳ ಕೆವೈಸಿ ದಾಖಲೆಗಳಲ್ಲಿರುವ ಹೆಸರನ್ನು ಆಧರಿಸಿ ಕರೆ ಮಾಡುವವರ ಗುರುತನ್ನು ಪ್ರದರ್ಶಿಸುವುದು ಇದರ ಉದ್ದೇಶ.
4G ಮತ್ತು 5G ಬಳಕೆದಾರರಿಗೆ ಸೌಲಭ್ಯ
ವರದಿಗಳ ಪ್ರಕಾರ, 4G ಮತ್ತು 5G ನೆಟ್ವರ್ಕ್ಗಳಲ್ಲಿ ಈ ವ್ಯವಸ್ಥೆಯನ್ನು ಡೀಫಾಲ್ಟ್ ಆಗಿ ಸಕ್ರಿಯಗೊಳಿಸುವ ಪ್ರಸ್ತಾವನೆಯಿದೆ. ಬಳಕೆದಾರರ ಮೊಬೈಲ್ನಲ್ಲಿ ಈಗಾಗಲೇ ಸೇವ್ ಮಾಡಿರುವ ಹೆಸರುಗಳ ಬದಲಿಗೆ, ಸೇವ್ ಮಾಡದ ನಂಬರ್ಗಳಿಂದ ಬರುವ ಕರೆಗಳಿಗೂ ನೋಂದಾಯಿತ ಹೆಸರು ಕಾಣಿಸಲಿದೆ. 2G ಮತ್ತು 3G ನೆಟ್ವರ್ಕ್ಗಳಲ್ಲಿ ಈ ವ್ಯವಸ್ಥೆಯ ಅನುಷ್ಠಾನವನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ.
ಅಂತರರಾಷ್ಟ್ರೀಯ ಕರೆಗಳಿಗೂ ಗುರುತು
ದೇಶೀಯ ಕರೆಗಳಿಗೆ ಟೆಲಿಕಾಂ ಕಂಪನಿಗಳ ದಾಖಲೆಗಳಲ್ಲಿರುವ ಹೆಸರನ್ನು ಪ್ರದರ್ಶಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಅಂತರರಾಷ್ಟ್ರೀಯ ಕರೆಗಳಿಗೆ ಪ್ರತ್ಯೇಕ ಸೂಚನೆ ತೋರಿಸುವ ವ್ಯವಸ್ಥೆಯನ್ನೂ ಪರಿಗಣಿಸಲಾಗಿದೆ.
ಈ ವ್ಯವಸ್ಥೆಯಲ್ಲಿ ಟೆಲಿಕಾಂ ಕಂಪನಿಗಳು ಚಂದಾದಾರರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಜೋಡಿಸುವ ಡೇಟಾಬೇಸ್ ನಿರ್ವಹಿಸಬೇಕಾಗುತ್ತದೆ. ಕರೆ ಮುಗಿದ ಬಳಿಕವೂ ಕರೆ ಮಾಡಿದವರ ಹೆಸರಿನ ಮಾಹಿತಿಯನ್ನು ಉಳಿಸಿಕೊಳ್ಳದಂತೆ ಭದ್ರತಾ ಕ್ರಮಗಳನ್ನು ಅನ















