ಉಡುಪಿ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ 1971 ರ ಯುದ್ಧದ ಅವಧಿಯಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧರಿಗೆ ಅಭಿನಂದನೆ ಸಲ್ಲಿಸಲು, ಮಾಜಿ ಯೋಧರ ನಂ. ರ‍್ಯಾಂಕ್ ಮತ್ತು ಹೆಸರು, ರೆಜಿಮೆಂಟ್ / ಕೋರ್ಪ್ಸ, ಪೂರ್ವಿ / ಪಶ್ಚಿಮಿ ಸ್ಟಾರ್ ಪಡೆದ ಸ್ವೀಕೃತಿ, 1971 ರಲ್ಲಿ ಸೇವೆ ಸಲ್ಲಿಸಿದ ವಿವರ ಹಾಗೂ ಪ್ರಸ್ತುತ ವಿಳಾಸ ಮತ್ತು ದೂರವಾಣಿ ಸಂಖ್ಯೆಯ ವಿವರಗಳನ್ನು ಮಾರ್ಚ್ 7 ರ ಒಳಗೆ ಇ-ಮೇಲ್ [email protected] ಅಥವಾ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರ ಕಚೇರಿಗೆ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.