ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಉದ್ದಿಮೆದಾರರು 2023-24 ನೇ ಸಾಲಿನಲ್ಲಿ ವ್ಯಾಪಾರ ಆನ್ಲೈನ್
ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ಪಡೆಯಬೇಕಾಗಿದ್ದು, ಪ್ರಸಕ್ತ ಸಾಲಿನಲ್ಲಿ ಆನ್ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ಪಡೆಯಲು ಬಾಕಿ ಇರುವವರು ಹಾಗೂ ನವೀಕರಿಸದೇ ಇರುವವರು ಕೂಡಲೇ ದಂಡ ಪಾವತಿಯೊಂದಿಗೆ ವೆಬ್ಸೈಟ್ http://www.mrc.gov.in/TradeLicense/login ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
2023 ರ ಏಪ್ರಿಲ್ 1 ರ ನಂತರ 2023-24 ನೇ ಸಾಲಿನ ಪರವಾನಿಗೆ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗುವುದು. ಉದ್ದಿಮೆ ಪರವಾನಿಗೆ ಪಡೆದು ಉದ್ದಿಮೆ ನಡೆಸದೇ ಇರುವವರು ನಗರಸಭೆ ಕಚೇರಿಗೆ ಲಿಖಿತ ಮಾಹಿತಿ ನೀಡಿ, ಉದ್ದಿಮೆ ಪರವಾನಿಗೆ ರದ್ದುಪಡಿಸಲು ಕ್ರಮವಹಿಸಬೇಕು. ತಪ್ಪಿದ್ದಲ್ಲಿ ಸದರಿ ಉದ್ದಿಮೆ ಶುಲ್ಕ ಹಾಗೂ ದಂಡ ವಿಧಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಪೌರಾಯುಕ್ತರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.