ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI ) ಟೆಲಿಕಾಂ ಕಂಪನಿಗಳ ಮೇಲೆ ದೊಡ್ಡ ಕ್ರಮ ಕೈಗೊಂಡಿದ್ದು, ಇನ್ನೂ ಮುಂದೆ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಹೊಸ ಆದೇಶವನ್ನು ಹೊರಡಿಸಿದೆ.
ಅದರ ಪ್ರಕಾರ ಕಂಪನಿಗಳು ಇಡೀ ತಿಂಗಳು ಮಾನ್ಯವಾಗಿರುವ ಕನಿಷ್ಠ ಒಂದು ಯೋಜನೆಯನ್ನು ಇರಿಸಿಕೊಳ್ಳಬೇಕು ಎಂದು ಹೇಳಿದೆ. ಟೆಲಿಕಾಂ ಕಂಪನಿಗಳು ಕನಿಷ್ಠ ಒಂದು ಪ್ಲಾನ್, ಒಂದು ವಿಶೇಷ ಟ್ಯಾರಿಫ್ ವೋಚರ್ ಮತ್ತು ಒಂದು ವಿಶೇಷ ರೀಚಾರ್ಜ್ ಪ್ಲಾನ್ಅನ್ನು ಇಡೀ ತಿಂಗಳು ವ್ಯಾಲಿಡಿಟಿಯೊಂದಿಗೆ ಇಟ್ಟುಕೊಳ್ಳಬೇಕು ಎಂದು ಟ್ರಾಯ್ ಹೇಳಿದೆ.
ಈ ದಿನಾಂಕವು ಮುಂದಿನ ತಿಂಗಳು ಬರದಿದ್ದರೆ, ಮುಂಬರುವ ತಿಂಗಳ ಕೊನೆಯ ದಿನಾಂಕದಂದು ರೀಚಾರ್ಜ್ ಮಾಡುವ ಅವಶ್ಯಕತೆಯಿದೆ. ಇದನ್ನು ಜಾರಿಗೆ ತರಲು ಕಂಪನಿಗಳಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಜೂ. 1, 2022 ರಿಂದ ಒಂದು ತಿಂಗಳ ಯೋಜನೆ ಅಗತ್ಯವಾಗಿದ್ದು, ಈ ಯೋಜನೆಯು ತಿಂಗಳ ಕೊನೆಯ ದಿನಾಂಕದವರೆಗೆ ಮಾನ್ಯವಾಗಿರುತ್ತದೆ.