ನವದೆಹಲಿ: ಬ್ಯಾಟರಿ ಸೇರಿದಂತೆ ರಫ್ ಆಯಂಡ್ ಟಫ್ ಯೂಸ್ಗೆ ಹೆಸರುವಾಸಿಯಾಗಿರುವ ಖ್ಯಾತ ಕಂಪನಿ ನೋಕಿಯಾ ಇದೀಗ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸುವ ಮೂಲಕ ಮತ್ತೆ ಕಮ್ಬ್ಯಾಕ್ಗೆ ಸಿದ್ದವಾಗಿದೆ.ನೋಕಿಯಾದ ಹೆಚ್ಎಮ್ಡಿ ಗ್ಲೋಬಲ್ ಇಂದು ಭಾರತದಲ್ಲಿ G42 ಹೆಸರಿನ ನೋಕಿಯಾ 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. G ಸರಣಿಯ ಈ ಸ್ಮಾರ್ಟ್ಫೋನ್ 6.56 ಇಂಚಿನ ಹೆಚ್ಡಿ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್ ಜತೆಗೆ ಸ್ನ್ಯಾಪ್ಡ್ರಾಗನ್480+5G ಪ್ರೊಸೆಸರ್, ಹೈಬ್ರಿಡ್ಸಿಮ್ ಸ್ಲಾಟ್ ಹೊಂದಿರಲಿದೆ.
ನೋಕಿಯಾ ಕಂಪನಿ ಅಗ್ಗದ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯತೆಗಳನ್ನೊಳಗೊಂಡ ಹೊಸ G ಸರಣಿಯ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ.
ಕ್ಯಾಮೆರಾ: Nokia G42, 5G ಸೆಟ್ ಹೆಚ್ಚುವರಿ RAM ಹೊಂದಿದ್ದು, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಇರಲಿದೆ. 50MP ಪ್ರೈಮರಿ ಕ್ಯಾಮೆರಾ, ಜೊತೆಗೆ ಹೆಚ್ಚುವರಿ 2MP ಮ್ಯಾಕ್ರೋ ಮತ್ತು 2MP ಡೆಪ್ತ್ ಕ್ಯಾಮೆರಾಗಳನ್ನು ಒಳಗೊಂಡಿದ್ದು, 8MP ಸೆಲ್ಫಿ ಕ್ಯಾಮೆರಾ ಹಾಗೂ ಎಲ್ಇಡಿ ಫ್ಲ್ಯಾಷ್ ಇರಲಿದೆ. ಹಾಗೆ ಆಂಡ್ರಾಯ್ಡ್13 ಜತೆಗೆ ಎರಡು ವರ್ಷಗಳ ಕಾಲ ಆಪರೇಟಿಂಗ್ ಸಿಸ್ಟಮ್ನ ಅಪ್ಡೇಟ್ ಮತ್ತು 3 ವರ್ಷಗಳ ಕಾಲ ಸೆಕ್ಯೂರಿಟಿ ಅಪ್ಡೇಟ್ ಅನ್ನು ನೋಕಿಯಾ ಖಚಿತ ಪಡಿಸಿದೆ.
ಎರಡು ಬಣ್ಣಗಳಲ್ಲಿ ಲಭ್ಯ: ಈ ಸ್ಮಾರ್ಟ್ಫೋನ್ ಎರಡು ಬಣ್ಣಗಳಲ್ಲಿರಲಿದೆ. ಆಕರ್ಷಕ ಪರ್ಪಲ್ ಮತ್ತು ಗ್ರೇ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. 11GB ಜೊತೆಗೆ 128GB ಕಾನ್ಫಿಗರೇಶನ್ನಲ್ಲಿ 6 GB ಫಿಸಿಕಲ್ RAM ಜೊತೆಗೆ 5 GB ವರ್ಚುಯಲ್ RAMಗಳಲ್ಲಿ ಈ ಹ್ಯಾಂಡ್ ಸೆಟ್ ಲಭ್ಯವಿರಲಿದೆ.
ಮೊಬೈಲ್ನ ಬೆಲೆ: ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ Nokia G42 5G ಸೆಟ್ ಬಜೆಟ್ ಫ್ರೆಂಡ್ಲಿ ಆಗಿದ್ದು, ಇದರ ಬೆಲೆ ಕೇವಲ RS: 12,599 ಆಗಿದ್ದು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಬ್ಯಾಟರಿ: ಈ ಮೊಬೈಲ್ 5000mAh ಬ್ಯಾಟರಿ ಹೊಂದಿದ್ದು ಟೈಪ್ ಸಿ ಪೋರ್ಟ್ ಕೇಬಲ್ನೊಂದಿಗೆ 20W ಫಾಸ್ಟ್ ಚಾರ್ಜರ್ ಸಪೋರ್ಟ್ ಮಾಡಲಿದೆ.
ಎಚ್ಎಂಡಿ ಗ್ಲೋಬಲ್ನ ಭಾರತ ಮತ್ತು ಎಪಿಎಸಿ ಉಪಾಧ್ಯಕ್ಷ ರವಿ ಕುನ್ವಾರ್, ‘ಈ ಫೋನ್ ನಮ್ಮ ಬಳಕೆದಾರರ ಅಗತ್ಯಗಳನ್ನು ಪೂರೈಸುವುದುರ ಬಗ್ಗೆ ಖಚಿತಪಡಿಸಿಕೊಳ್ಳಲು ನಮ್ಮ ತಂಡವು ಕೆಲಸ ಮಾಡಿದೆ. ಮುಂಬರುವ ವರ್ಷಗಳಲ್ಲಿ Gಸಿರಿಸ್ನಲ್ಲಿ ಹೆಚ್ಚಿನ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ.
ಮಾರಾಟ ದಿನಾಂಕ: ಇಂದು ಬಿಡುಗಡೆಗೊಂಡಿರು ಅಗ್ಗದ ಬೆಲೆಯ ನೋಕಿಯಾ G42 ಮೊಬೈಲ್ ಸೆಪ್ಟಂಬರ್ 15ರಿಂದ ಆನ್ಲೈನ್ಗಳಲ್ಲಿ ಖರೀದಿಸಬಹುದಾಗಿದೆ.