ಮಡಿಕೇರಿ, ಫೆಬ್ರವರಿ 07: ಪ್ರವಾಸಿಗರ ಸ್ವರ್ಗವಾದ ಮಡಿಕೇರಿಯಲ್ಲಿ ವಾರಾಂತ್ಯದಲ್ಲಿ ರಜಾದಿನದಲ್ಲಿ ಹಲವರ ನೆಚ್ಚಿನ ಸ್ಪಾಟ್. ಈ ಪ್ರವಾಸಿಗರ ಕಾರಣಕ್ಕಾಗಿಯೇ ಇದೀಗ ಮಡಿಕೇರಿಯ ಅಂದ ಹಾಳಾಗಿದ್ದು ವಿಪರೀತ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯಗಳು ಒಟ್ಟಾಗಿದೆ. ಪರಿಸರಕ್ಕೂ ಹಾನಿಕಾರಕವಾಗಿದೆ. ಇದನ್ನು ವಿಲೇವಾರಿ ಮಾಡುವುದೇ ನಗರಸಭೆಗೆ ತಲೆನೋವಾಗಿದ್ದು. ಈಗ ನಗರಸಭೆ ಹೊಸ ಯೋಜನೆ ರೂಪಿಸಿದೆ. ಈ ಕುರಿತು ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಮಡಿಕೇರಿ ನಗರದಲ್ಲಿ ಎರಡು ಲೀಟರ್ವರೆಗಿನ ಪ್ಲಾಸ್ಟಿಕ ವಾಟರ್ ಬಾಟಲಿಗಳ ಮಾರಾಟವನ್ನ ನಿಷೇಧಿಸಿ ಆದೇಶ ಹೊರಡಿಸಿದೆ.
ಮಡಿಕೇರಿಯ ವರ್ತಕರು, ಹೋಮ್ ಸ್ಟೇ ರೆಸಾರ್ಟ್ ಮಾಲೀಕರು ಹಾಗೂ ಕಲ್ಯಾಣ ಮಂಟಪಗಳ ಜೊತೆ ನಗರಸಭೆ ಮೀಟಿಂಗ್ ಮಾಡಿದ್ದು, ಮಡಿಕೇರಿ ನಗರದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ ಮಾಡದಂತೆ ಮನವೊಲಿಕೆ ಮಾಡಿದೆ. ಮಡಿಕೇರಿ ನಗರದಲ್ಲಿ ಈಗಾಗಲೇ ಮೂರು ಕಡೆ ಜಲ ಶುದ್ಧೀಕರಣ ಘಟಕ ಇದ್ದು ಅಲ್ಲಿ 1 ರೂ. ಹಾಗೂ 5 ರೂ. ನಾಣ್ಯ ಹಾಕಿದರೆ ಬೇಕಾದಷ್ಟು ಕುಡಿಯುವ ನೀರು ದೊರೆಯುತ್ತದೆ. ಅದರ ಜೊತೆಗೆ ನಗರದ ಹಲವು ಕಡೆ ವಾಟರ್ ಫಿಲ್ಟರ್ಗಳನ್ನೂ ಅಳವಡಿಸಲು ಕೂಡ ಯೋಜನೆ ಸಿದ್ಧವಾಗಿದೆ. ನನಗರದಲ್ಲಿ ಕಸದ ಹೊರೆ ತಗ್ಗಿಸುವ ಉದ್ದೇಶದಿಂದ ನಗರಸಭೆ ಈ ಕ್ರಮ ಕೈಗೊಂಡಿದೆ.
ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಅವಳವಿಡಿಸಿದೆ ಹಾಗಾಗಿ ನೀವು ಇನ್ನು ಮಡಿಕೇರಿಯಲ್ಲಿ ವಾಟರ್ ಬಾಟಲ್ ಕೇಳಿದರೆ ಸಿಗಲ್ಲ.
ಸದ್ಯ ಈ ಯೋಜನೆಯನ್ನ ಪ್ರಾಯೋಗಿಕವಾಗಿ ಮಡಿಕೇರಿ ನಗರದಲ್ಲಿ ಮಾತ್ರ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯನ್ನು ಪ್ಲಾಸ್ಟಿಕ್ ಬಾಟಲಿ ಮುಕ್ತ ಮಾಡುವ ಸಂಬಂಧ ಜಿಲ್ಲಾಡಳಿತ ಯೋಚಿಸುತ್ತಿದೆ.












