ಉಡುಪಿ: ನಿಟ್ಟೂರು ಪ್ರೌಢಶಾಲೆಯ ಹತ್ತನೇ ತರಗತಿಯ ಎಪ್ಪತ್ತೊಂದು ವಿದ್ಯಾರ್ಥಿಗಳು ಪುತ್ತೂರು ಗ್ರಾಮದ ಬೂದ ಪೂಜಾರಿಯವರ ಸುಮಾರು ಒಂದು ಎಕರೆ ಗದ್ದೆಯಲ್ಲಿ ನೇಜಿ ನೆಟ್ಟು, ಒಂದಷ್ಟು ಹೊತ್ತು ಕೆಸರುಗದ್ದೆಯಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ಮಿಂದು, ವಿವಿಧ ಆಟಗಳನ್ನಾಡುತ್ತಾ ಭಾನುವಾರದ ರಜೆಯನ್ನು ಸ್ಮರಣೀಯಗೊಳಿಸಿ ಸಂಭ್ರಮಿಸಿದರು.
ಮಕ್ಕಳೊಂದಿಗೆ ಮಾಜಿ ಶಾಸಕ, ನಿಟ್ಟೂರು ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಕೆ.ರಘುಪತಿ ಭಟ್, ಉಪಾಧ್ಯಕ್ಷ ಎಸ್.ವಿ.ಭಟ್, ಕಾರ್ಯದರ್ಶಿ ಮುರಳಿ ಕಡೆಕಾರ್, ಎಚ್.ಎನ್.ಶೃಂಗೇಶ್ವರ, ಮುಖ್ಯ ಶಿಕ್ಷಕಿ ಅನಸೂಯ, ಅಧ್ಯಾಪಕ ವೃಂದ, ಹಳೆ ವಿದ್ಯಾರ್ಥಿಗಳಾದ ದಿನೇಶ್ ಪೂಜಾರಿ, ಪಿ.ಪರಶುರಾಮ ಶೆಟ್ಟಿ, ಸಿ.ಎ. ಪ್ರದೀಪ್ ಜೋಗಿ, ವಿನಯ ಕುಮಾರ್, ಡಾ. ಪ್ರತಿಮಾ, ಮಂಜುನಾಥ್,ಹರೀಶ ಆಚಾರ್ಯ, ಸುಧೀರ್, ಸುಮಂತ್ ಪಾಲ್ಗೊಂಡು ವಿದ್ಯಾರ್ಥಿಗಳ ಸಂತಸವನ್ನು ಇಮ್ಮಡಿಗೊಳಿಸಿದರು.
ವಿದ್ಯಾರ್ಥಿಗಳಿಗೆ ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಧಾರವಾಡದ ಖ್ಯಾತ ಹೋಟೆಲ್ ಉದ್ಯಮಿ, ಶಾಲಾ ಹಳೆ ವಿದ್ಯಾರ್ಥಿಯೂ ಆಗಿರುವ ಮಹೇಶ್ ಶೆಟ್ಟಿ ಅವರು ಒದಗಿಸಿದರು. ಪುತ್ತೂರು ದೇವಳದ ಕೃಷ್ಣಮೂರ್ತಿ ಭಟ್ ಸಹಕರಿಸಿದರು. ದೈಹಿಕ ಶಿಕ್ಷಕ ಅಶೋಕ ಎಂ.ಸಂಯೋಜಿಸಿದರು.