udupixpress
Home Trending ಜೂ.20ರಂದು ನಿಟ್ಟೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣ, ಉದ್ಯೋಗಾವಕಾಶಗಳ ಬಗ್ಗೆ ವೆಬಿನಾರ್

ಜೂ.20ರಂದು ನಿಟ್ಟೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣ, ಉದ್ಯೋಗಾವಕಾಶಗಳ ಬಗ್ಗೆ ವೆಬಿನಾರ್

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ‘ಇಂಜಿನಿಯರಿಂಗ್ ಎಜುಕೇಶನ್ & ಎಂಪ್ಲಾಯ್ಮೆಂಟ್ ಪ್ರಾಸ್ಪೆಕ್ಟ್ಸ್-ಪೋಸ್ಟ್ ಕೋವಿಡ್ ಎಂಬ ವಿಷಯದ ಬಗೆಗೆ ಜೂ.20 ರಂದು ವೆಬಿನಾರ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಚಿಪ್ಳೂಣ್ಕರ್, ಎಡ್ಮಿಶನ್ಸ್ & ಅಲ್ಯೂಮ್ನಯ್ ಅಫೇರ್ಸ್ ವಿಭಾಗದ ಡೀನ್ ಡಾ.ಕೆ ರಾಜೇಶ್ ಶೆಟ್ಟಿ, ಅಭ್ಯುದಯ್-ಕೌನ್ಸಲಿಂಗ್, ವೆಲ್ಫೇರ್, ಟ್ರೈನಿಂಗ್ & ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥೆ ಪ್ರೊ. ಶಾಲಿನಿ ಕೆ ಶರ್ಮ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು.

ಈ ಕಾರ್ಯಕ್ರಮದಲ್ಲಿ ವಿವಿಧ ಇಂಜಿನಿಯರಿಂಗ್ ವಿಭಾಗಗಳು, ಅವುಗಳಲ್ಲಿನ ವೃತ್ತಿಪರ ಅವಕಾಶಗಳು, ಅಭ್ಯುದಯ ವಿಭಾಗದ ಸಫಲತೆ ಹಾಗೂ ಕೊರೊನ ಮಹಾಮಾರಿಯ ಅನಂತರದ ಉದ್ಯೋಗಾವಕಾಶಗಳ ಬಗೆಗೆ ಚರ್ಚಿಸಲಿರುವರು. ಈ ಮಾಹಿತಿ ವಿನಿಮಯ ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಇರುವ ಗೊಂದಲಗಳನ್ನು ಪರಿಹರಿಸಲು ಪ್ರಶ್ನೋತ್ತರವನ್ನೂ ನಡೆಸಲಾಗುವುದು. ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ.ಗ್ರೈನಲ್ ಡಿಮೆಲ್ಲೊ ಈ ಕಾರ್ಯಕ್ರಮವನ್ನು ಸಂಯೋಜಿಸಲಿರುವರು.
ಆಸಕ್ತರು

ಲಿಂಕ್‍ನ ಮೂಲಕ ಕಾರ್ಯಕ್ರಮಕ್ಕೆ ತಮ್ಮನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

error: Content is protected !!