ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಕ್ಯೂ.ಎಸ್.ಐ-ಗೇಜ್ ಭಾರತೀಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮೌಲ್ಯಾಂಕನದಲ್ಲಿ ಡೈಮಂಡ್ ರೇಟಿಂಗ್ ಪಡೆದುಕೊಂಡಿದೆ.
ಕ್ಯೂ.ಎಸ್.ಐ-ಗೇಜ್ ಮೌಲ್ಯಾಂಕನವನ್ನು ಇಂಗ್ಲೆಂಡಿನ ಕ್ಯೂ.ಎಸ್.ಕ್ವಾಕರೆಲಿ ಸೈಮಂಡ್ಸ್ ಲಿಮಿಟೆಡ್ ಮತ್ತು ಭಾರತದ ಎರಾ ಫೌಂಡೇಶನ್ ಜಂಟಿಯಾಗಿ ನಡೆಸುತ್ತಾರೆ. ಕ್ಯೂ.ಎಸ್. ಕ್ವಾಕರೆಲಿ ಸೈಮಂಡ್ಸ್ ಲಿಮಿಟೆಡ್ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟ ಅಂತಾರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆಯಾಗಿದೆ.
ಕ್ಯೂ.ಎಸ್.ಐ-ಗೇಜ್ ಮೌಲ್ಯಾಂಕನವು ಒಟ್ಟು ೬ ಪ್ರಾಥಮಿಕ ಹಾಗೂ ೨ ದ್ವಿತೀಯ ಮಾನದಂಡಗಳ ಆಧಾರಿತ ಗುಣಮಟ್ಟದ ಮೌಲ್ಯಮಾಪನ ಪ್ರಕ್ರಿಯೆಯಾಗಿದೆ. ಪ್ರಸ್ತುತ ಈವರೆಗಿನ ಕಾಲೇಜು ಮಟ್ಟದ ರೇಟಿಂಗ್‌ನಲ್ಲಿ ನಿಟ್ಟೆ ತಾಂತ್ರಿಕ ಕಾಲೇಜು ಮಾತ್ರವೇ ಡೈಮಂಡ್ ರೇಟಿಂಗ್ ಪಡೆಯುವಲ್ಲಿ ಸಫಲವಾಗಿದೆ. ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಶಿಕ್ಷಣದ ಗುಣಮಟ್ಟ, ಸೌಲಭ್ಯಗಳು, ಸಂಶೋಧನೆಗೆ ಇರುವ ಪ್ರೋತ್ಸಾಹ, ಉದ್ಯಮಶೀಲತೆ, ಕಲಾ ಹಾಗೂ ಸಾಂಸ್ಕೃತಿಕ ವಿಚಾರಗಳಿನ ಪ್ರೋತ್ಸಾಹ ಮುಂತಾದ ವಿಷಯಗಳ ಆಧಾರದ ಮೇಲೆ ಈ ರೇಟಿಂಗ್‌ನ್ನು ನೀಡಲಾಗಿದೆ. ಈ ರೇಟಿಂಗ್‌ನ ಪ್ರಮಾಣಪತ್ರವನ್ನು ಬೆಂಗಳೂರಿನಲ್ಲಿ ಆ.೫ ರಂದು ನಡೆದ ಸಮಾರಂಭದಲ್ಲಿ ಕ್ಯೂ.ಎಸ್. ವರ್ಲ್ಡ್ ರ್‍ಯಾಂಕಿಂಗ್‌ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಬೆನ್ ಸೊಟರ್ ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅವರಿಗೆ ನೀಡಿದರು.