ನಿಟ್ಟೆಯಲ್ಲಿ ಸೋಲಾರ್ ಸ್ಟೂಡೆಂಟ್ ಅಂಬಾಸಿಡರ್ ಕಾರ್ಯಾಗಾರ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗವು ನಿಟ್ಟೆಯ ಉನ್ನತ್ ಭಾರತ್ ಅಭಿಯಾನ್ ಘಟಕದ ಸಹಯೋಗದಲ್ಲಿ ಇತ್ತೀಚೆಗೆ ಮಹಾತ್ಮಾ ಗಾಂಧಿಜಿಯವರ 15೦ನೇ ಜನ್ಮೋತ್ಸವವನ್ನು ‘ಗಾಂಧಿ ಗ್ಲೋಬಲ್ ಸೋಲಾರ್ ಯಾತ್ರಾ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಾಗೂ ‘ಸೋಲಾರ್ ಸ್ಟೂಡೆಂಟ್ ಅಂಬಾಸಿಡರ್ ಕಾರ್ಯಾಗಾರ’ವನ್ನು ಆಯೋಜಿಸುವುದರ ಮೂಲಕ ಆಚರಿಸಿತು.

ಸೌರವಿದ್ಯುತ್‌ನ ಪ್ರಾಮುಖ್ಯತೆ, ಬಳಕೆಯ ಬಗೆಗೆ ಈ ಕಾರ್ಯಾಗಾರದಲ್ಲಿ ವಿವರಿಸಲಾಯಿತು. ಸುಮಾರು 5೦ ವಿದ್ಯಾರ್ಥಿಗಳು ವಿವಿಧ ಬಿಡಿಭಾಗಗಳನ್ನು ಉಪಯೋಗಿಸಿ ಸೋಲಾರ್ ಲ್ಯಾಂಪ್‌ಗಳನ್ನು ತಯಾರಿಸುವುದರ ಮೂಲಕ ಸೌರಶಕ್ತಿಯ ಉಪಯೋಗದ ಬಗ್ಗೆ ಮಾಹಿತಿ ಪಡೆದುಕೊಂಡರು. ಇಲೆಕ್ಟ್ರಿಕಲ್ ವಿಭಾಗದ ಡಾ.ಅನಿತಾ ಹಾಗೂ ಅಪರ್ಣಾ ಪಲಿಮಾರ್ ಕಾರ್ಯಾಗಾರ ಸಂಯೋಜಿಸಿದರು.