ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗವು ‘ಡಿಸ್ಕ್ರೀಟ್ ಮ್ಯಾತಮ್ಯಾಟಿಕ್ಸ್ -ಕಂಪ್ಯೂಟೇಶನಲ್ ಸೊಲ್ಯೂಶನ್ ಆಫ್ ಡಿಫರೆನ್ಶಿಯಲ್ ಇಕ್ವೇಶನ್’ ಎಂಬ ವಿಷಯದ ಬಗೆಗೆ ಇತ್ತೀಚೆಗೆ ಪ್ರಾಧ್ಯಾಪಕರ ಜ್ಞಾನಾಭಿವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.
ಎನ್.ಐ.ಟಿ.ಕೆಯ ಎಂ.ಎ.ಸಿ.ಎಸ್ ವಿಭಾಗದ ಪ್ರೊಫೆಸರ್ ಡಾ.ವಿಶ್ವನಾಥ್ ಹಾಗೂ ಎಸ್.ಎಂ.ವಿ.ಐ.ಟಿ.ಎಂ ಬಂಟಕಲ್‌ನ ಕಂಪ್ಯೂಟರ್‌ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಕುಮುದಾಕ್ಷಿ ಸ್ವಾಗತಿಸಿದರು. ಸಹಪ್ರಧ್ಯಾಪಕಿ ಅಂಬಿಕ ಹಾಗೂ ಭವ್ಯ ಡಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕ ಡಾ. ಶಂಕರನ್ ವಂದಿಸಿದರು.












