ಕಾರ್ಕಳ: ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿಯರಿಂಗ್ (ಇ & ಸಿಇ) ವಿಭಾಗದ ವತಿಯಿಂದ ನವದೆಹಲಿಯ ಎಐಸಿಟಿಇ ಪ್ರಾಯೋಜಿತ ಆನ್‌ಲೈನ್ ಅಲ್ಪಾವದಿ ತರಬೇತಿ ಕಾರ್ಯಕ್ರಮ (ಎಸ್‌ಟಿಟಿಪಿ) ಸರಣಿಯನ್ನು ಆ.7 ರಂದು ಸಂಸ್ಥೆಯಲ್ಲಿ ಉದ್ಘಾಟಿಸಲಾಯಿತು.
ಅಡ್ವಾನ್ಸ್ಡ್ ಟಾಪಿಕ್ಸ್ ಇನ್ ಮೆಷಿನ್ ಲರ್ನಿಂಗ್ & ಅಪ್ಲಿಕೇಶನ್ ಇನ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಎಂಬ ವಿಷಯದ ಬಗ್ಗೆ ಈ ತರಬೇತಿ ನಡೆಯಲಿದೆ. ಮೊದಲ ಎಸ್‌ಟಿಟಿಪಿ ‘ಮ್ಯಾಥಮ್ಯಾಟಿಕಲ್ ಫೌಂಡೇಷನ್ಸ್ ಆಫ್ ಮೆಷಿನ್ ಲರ್ನಿಂಗ್ (ಲೀನಿಯರ್ ಆಲ್ಜೀಬ್ರಾ ಮತ್ತು ಪ್ರೊಬ್ಯಾಬ್ಲಿಟಿ ಬೇಸಿಸ್)’ ಎಂಬ ವಿಷಯದಲ್ಲಿ ಆಗಸ್ಟ್ 7ರಿಂದ 13 ರವರೆಗೆ ನಡೆಯಲಿದೆ. 2ನೇ ಎಸ್‌ಟಿಟಿಪಿ ‘ಮ್ಯಾಥಮ್ಯಾಟಿಕಲ್ ಫೌಂಡೇಷನ್‌ಆಫ್ ಮೆಷಿನ್ ಲರ್ನಿಂಗ್ (ಸ್ಟ್ಯಾಟಿಸ್ಟಿಕ್ಸ್ ಆಂಡ್ ನ್ಯೂರಲ್ ಬೇಸಿಸ್)’ ವಿಷಯದ ಬಗ್ಗೆ ಆಗಸ್ಟ್ 17 ರಿಂದ 21 ರವರೆಗೆ ನಡೆಯಲಿದೆ. ಅಂತಿಮ ಎಸ್‌ಟಿಟಿಪಿ, ‘ಅಡ್ವಾನ್ಸ್‌ಡ್ ಟಾಪಿಕ್ಸ್ ಅಂಡ್ ಅಪ್ಲಿಕೇಶನ್ಸ್ ಆಫ್ ಮೆಷಿನ್ ಲರ್ನಿಂಗ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ.
ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅವರು, ಈ ಎಸ್‌ಟಿಟಿಪಿ ಸರಣಿಗಾಗಿ ನವದೆಹಲಿಯ ಎಐಸಿಟಿಇ ಯಿಂದ ಪ್ರಾಯೋಜಕತ್ವ ಪಡೆಯುವಲ್ಲಿ ಯಶಸ್ವಿಯಾದ ಇ & ಇಸಿ ವಿಭಾಗವನ್ನು ಅಭಿನಂದಿಸಿದರು. ಇಲ್ಲಿ ನಡೆಯುವ ತರಬೇತಿಗಳು ಪರಿಣಾಮಕಾರಿ, ಯಶಸ್ವಿ ಮತ್ತು ಫಲಪ್ರದವಾಗಲಿ ಎಂದು ಅವರು ಹಾರೈಸಿದರು.
ಬೆಂಗಳೂರು ಐಐಎಸ್‌ಸಿ ಸಿಇಡಿಟಿಯ ನೆಟ್‌ವರ್ಕ್ ಪ್ರಾಜೆಕ್ಟ್‌ನ ಮಾಜಿ ಮುಖ್ಯಸ್ಥ ಡಾ.ಅಶೋಕ್ ರಾವ್ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮೆಷಿನ್ ಲರ್ನಿಂಗ್‌ನ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಗಣಿತಾತ್ಮಕ ಹಿನ್ನೆಲೆಯನ್ನು ಕಲಿಯುವ ಮಹತ್ವವನ್ನು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್‌ಎಂ.ಚಿಪ್ಳೂಣ್‌ಕರ್ ಅವರು ಮೆಷಿನ್ ಲರ್ನಿಂಗ್‌ನ ಮಹತ್ವವನ್ನು ಮತ್ತು ಅದರ ಪ್ರಯೋಜನವನ್ನು ತಿಳಿಸಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿಯರಿಂಗ್ (ಇ & ಸಿಇ) ವಿಭಾಗದ ಮುಖ್ಯಸ್ಥೆ ಮತ್ತು ಎಸ್‌ಟಿಟಿಪಿ ಸಂಯೋಜಕಿ ಡಾ.ರೇಖಾ ಭಂಡಾರ್ಕರ್ ಸ್ವಾಗತಿಸಿದರು ಹಾಗೂ ಪ್ರಸ್ತುತ ಸನ್ನಿವೇಶದಲ್ಲಿ ಮೆಷಿನ್ ಲರ್ನಿಂಗ್‌ನ ಮಹತ್ವವನ್ನು ತಿಳಿಸಿಕೊಟ್ಟರು. ಸಂಘಟನಾ ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಭಟ್ ಎಸ್‌ಟಿಟಿಪಿಯ ದೃಷ್ಟಿಕೋನವನ್ನು ವಿವರಿಸಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಅಸೋಸಿಯೇಟ್ ಪ್ರೊಫೆಸರ್ ಡಾ.ರೂಪಾ ಬಿ.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.