ಮಂಗಳೂರು : ನಿರ್ಮಾಣ್ ಬಿಲ್ಡರ್ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಕಲರಿಂಗ್ ಮತ್ತು ಛದ್ಮವೇಷ ಸ್ಪರ್ಧೆ ನಗರದ ಭಾರತ್ ಮಾಲ್ ನಲ್ಲಿ ನಡೆಯಿತು.
400 ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ದ್ರಿತಿ ಎಸ್. ಪ್ರಥಮ, ಸಿಂಚನಾ ಕೋಟ್ಯಾನ್ ದ್ವಿತೀಯ ಹಾಗೂ ಶೀಯಾನ್ ತೃತೀಯ ಬಹುಮಾನ ಪಡೆದರು. ಕಲರಿಂಗ್ ಸ್ಪರ್ಧೆಯಲ್ಲಿ ವೈಭವಿ ಅಳಕೆ ಪ್ರಥಮ, ಕಾರ್ತಿಕ್ ಎಸ್. ದ್ವಿತೀಯ ಹಾಗೂ ಭಾರ್ಗವಿ ಎಸ್. ಆಚಾರ್ಯ ತೃತೀಯ ಬಹುಮಾನ ಪಡೆದರು.
ಛದ್ಮವೇಷ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ರುತ್ವ ಎಚ್.ಪಿ. ಪ್ರಥಮ,ಸ್ನಿಥಿಕ್ ಎನ್. ದ್ವಿತೀಯ ಹಾಗೂ ಐಷಾಮಿಬಿ.ಎಂ. ತೃತೀಯ ಬಹುಮಾನ ಪಡೆ ದರು. ಇದೇ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ನಿಹಾರಿಕಾ ಬಿ.ಎಂ. ಪ್ರಥಮ, ಮನಸ್ವಿ ಕಾಂಚನ್ ದ್ವಿತೀಯ ಹಾಗೂ ಚಿವ್ನೀಶ್ ಕೊಟ್ಟಾರಿ ತೃತೀಯ ಬಹುಮಾನ ಪಡೆದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ನಿರ್ಮಾಣ್ ಬಿಲ್ಡರ್ ವತಿಯಿಂದ ತಲಾ 1 ಲಕ್ಷ ರೂ.ನಂತೆ 4 ಕೋಟಿ ರೂ. ಮೊತ್ತದ ಗಿಫ್ಟ್ ವೋಚರ್ ನೀಡಲಾಯಿತು. ಈ ಗಿಫ್ಟ್ ವೋಚರ್ ಅನ್ನು ಗ್ರಾಹಕರು ಈಗಿರುವ ಎಲ್ಲ ಕೊಡುಗೆಗಳನ್ನು ಹೂರತುಪಡಿಸಿ, ಹೆಚ್ಚುವರಿಯಾಗಿ ತಮಗೆ ಬೇಕಾಗಿರುವ ನಿರ್ಮಾಣ್ ಬಿಲ್ಡರ್ನ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ಖರೀದಿಸುವಾಗ ಬಳಕೆ ಮಾಡಬಹುದಾಗಿದೆ ಎಂದು
ನಿರ್ಮಾಣ್ ಬಿಲ್ಡರ್ ವ್ಯವಸ್ಥಾಪಕ ಪಾಲುದಾರ ಕೃಷ್ಣರಾಜ್ ಸಾಲ್ಯಾನ್ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಸ್ ಪೇಪರ್ನಲ್ಲಿ ಹೂವು ಮತ್ತು ಹಣ್ಣಿನ ಬೀಜದ ಮಿಶ್ರಣದೊಂದಿಗೆ ತ್ರಿರ್ವಣ ಧ್ವಜವನ್ನು ರಚಿಸಿ ಪರಿಸರ ಸ್ನೇಹಿ ಧ್ವಜವನ್ನು ಬಳಸುವ ಬಗ್ಗೆ ಮತ್ತು ಪ್ಲಾಸ್ಟಿಕ್ ಧ್ವಜ ನಿಷೇಧದ ಬಗ್ಗೆ ಅರಿವು ಮೂಡಿಸಿದರು.
ಮುದ್ರ ಡೇವಲಪರ್ ಮಾಲಕ ಕೆ. ವಾಸುದೇವ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಿರ್ಮಾಣ್ ಬಿಲ್ಡರ್ ಪಾಲುದಾರ ಕೃಷ್ಣರಾಜ್ ಮಯ್ಯ, ಸುಭಾಷ್ ನಾಯಕ್ ಉಪಸ್ಥಿತರಿದ್ದರು. ಮಂಗಳೂರಿನ ಡ್ರೀಮ್ ಕ್ಯಾಚರ್ ಈವೆಂಟ್ ಸಂಸ್ಥೆ ಕಾರ್ಯಕ್ರಮವನ್ನು ನಿರೂಪಿಸಿದರು.












