ನವದೆಹಲಿ: ಭಾರತ-ಕೆನಡಾ ರಾಜತಾಂತ್ರಿಕ ಗಲಾಟೆ ತೀವ್ರಗೊಳ್ಳುತ್ತಿರುವಂತೆಯೇ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಖಲಿಸ್ತಾನಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಫೆಡರಲ್ ಏಜೆನ್ಸಿಯು ಖಲಿಸ್ತಾನಿಗಳ ಮಾಹಿತಿಗಾಗಿ ನಗದು ಬಹುಮಾನಗಳನ್ನು ಘೋಷಿಸಿದೆ. ಬುಧವಾರ ಐದು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಕಾರ್ಯಕರ್ತರ ಬಂಧನ ನಡೆದಿದೆ. ಭಯೋತ್ಪಾದಕರು ಅವರಿಗೆ ವಿತ್ತೀಯ ಪ್ರಯೋಜನಗಳ ಭರವಸೆ ನೀಡುವ ಮೂಲಕ ಬಿಕೆಐಗೆ ಹೊಸ ಸದಸ್ಯರನ್ನು ನೇಮಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಕೆಐ ಕಾರ್ಯಕರ್ತರಾದ ಹರ್ವಿಂದರ್ ಸಿಂಗ್ ಸಂಧು ಮತ್ತು ಲಖ್ಬೀರ್ ಸಿಂಗ್ ಸಂಧು ಅವರನ್ನು ಬಂಧಿಸಲಾಗಿದ್ದು, ಪ್ರತಿಯೊಬ್ಬರ ವಿವರಗಳಿಗೆ 10 ಲಕ್ಷ ರೂ ನಗದು ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು. ಪರ್ಮಿಂದರ್ ಸಿಂಗ್ ಕೈರಾ , ಸತ್ನಾಮ್ ಸಿಂಗ್ ಮತ್ತು ಯದ್ವಿಂದರ್ ಸಿಂಗ್ ಅಲಿಯಾಸ್ ಮಾಹಿತಿಗೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ಭರವಸೆ ನೀಡಿದೆ.
ಭಾರತದ ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡಲು ಮತ್ತು ಪಂಜಾಬ್ ರಾಜ್ಯದಲ್ಲಿ ಭಯೋತ್ಪಾದನೆಯನ್ನು ಹರಡಲು BKI ಯ ಪ್ರಯತ್ನಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಇವರೆಲ್ಲ ಆರೋಪಿಗಳಾಗಿದ್ದಾರೆ.