ನವದೆಹಲಿ: ಈ ಹಿಂದಿನ ಕೋವಿಡ್ ಪ್ರಕರಣದ ಮಾದರಿಗಳನ್ನು ಉಲ್ಲೇಖಿಸಿ ಜನವರಿ ಮಧ್ಯಭಾಗದಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ 40 ದಿನಗಳು ನಿರ್ಣಾಯಕವಾಗಲಿವೆ ಎಂದು ಆರೋಗ್ಯ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.
ಈ ಹಿಂದೆ, ಪೂರ್ವ ಏಷ್ಯಾದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಿಸಿದ 30-35 ದಿನಗಳ ನಂತರ ಹೊಸ ಅಲೆಯು ಭಾರತವನ್ನು ಅಪ್ಪಳಿಸಿದೆ ಎಂದು ಗಮನಿಸಲಾಗಿದೆ. ಇದು ಒಂದು ಪ್ರವೃತ್ತಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಸೋಂಕಿನ ತೀವ್ರತೆ ಕಡಿಮೆಯಾಗಿದೆ. ಕೋವಿಡ್ ಅಲೆ ಎದ್ದರೂ ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆ ಇರುತ್ತದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತದಲ್ಲಿ ಕೋವಿಡ್ ನ ಸಂಭಾವ್ಯ ಅಲೆಯನ್ನು ಎದುರಿಸಲು ಆಡಳಿತ ಯಂತ್ರವನ್ನು ಅದಾಗಲೇ ಸಜ್ಜುಗೊಳಿಸಲಾಗಿದ್ದು, ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಕೂಡಾ ಮಾಡಲಾಗಿದೆ.