ಮಂಗಳೂರು: ಮಂಗಳೂರು ಏರ್ ಪೋರ್ಟ್ನಲ್ಲಿ ಮಂಗಳವಾರ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದ್ದು, ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
24 ಕ್ಯಾರೆಟ್ ನ 349.480 ಗ್ರಾಂ. ಸುಮಾರು 12.06 ಲಕ್ಷ ಮೌಲ್ಯದ ಚಿನ್ನವನ್ಮು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ .ದುಬೈನಿಂದ ಬಂದ ಪ್ರಯಾಣಿಕನೋರ್ವ
ಟೈಗರ್ ಬಾಮ್ ಕ್ಯಾಪ್, ಟಾಲ್ಕಂ ಪೌಡರ್ ಬಾಟಲಿಯಲ್ಲಿ ಇಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.












