ಕಿಲ್ಲರ್ ಕೊರೋನಾಗೆ ಭಾರತದಲ್ಲಿ ಮೊದಲ ಬಲಿ

ಬೆಂಗಳೂರು: ಕಿಲ್ಲರ್ ಕೊರೋನಾಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಕಲ್ಬುರ್ಗಿಯಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟ 76 ವರ್ಷದ ವ್ಯಕ್ತಿಗೆ ಸೋಂಕು ತಗಲಿರುವುದು ವ್ಯದ್ಯಕೀಯ ವರದಿಯಿಂದ ಖಚಿತವಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದ, ಸಾವನ್ನಪ್ಪಿದ ಜತೆಗೆ ಇದ್ದವರನ್ನೂ ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದು‌ ರಾಜ್ಯ ಹಾಗೂ ದೇಶದಲ್ಲೇ ಕಂಡುಬಂದ ಮೊದಲ ಪ್ರಕರಣವಾಗಿದೆ.

ಸೌದಿ ಅರೇಬಿಯಾದಿಂದ ಉಮ್ರಾ ಯಾತ್ರೆ ಮುಗಿಸಿಕೊಂಡು ಬಂದಿದ್ದ ಕಲಬುರ್ಗಿಯ ವೃದ್ಧ ಕೊರೊನೊ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬುವುದು ದೃಢಪಟ್ಟಿದೆ.
ಮೃತ ವ್ಯಕ್ತಿ ಜನವರಿ 29ರಂದು ಕಲಬುರ್ಗಿಯಿಂದ ಸೌದಿಯ ಮಕ್ಕಾದ ಉಮ್ರಾ ಯಾತ್ರೆಗೆ ತೆರಳಿದ್ದರು. ಫೆ. 29ರಂದು ಒಂದು ತಿಂಗಳ ಯಾತ್ರೆ ಮುಗಿಸಿ ಕಲಬುರ್ಗಿ ಮರಳಿದ್ದರು. ಮಾ. 6ರಂದು ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಲಬುರ್ಗಿಯ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿಲಾಗಿತ್ತು. ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆ ಯಲ್ಲಿ ಮಾ. 9ರಂದು ವೃದ್ದನನ್ನು ಹೈದರಾಬಾದ್ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ ಮಾರ್ಚ್ 10ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದೀಗ ವೃದ್ಧನ ವೈದ್ಯಕೀಯ ವರದಿ ಬಂದಿದ್ದು, ಅದರಲ್ಲಿ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ο