ಫೆ. 27 ರಂದು ನೀಲಾವರ ಶ್ರೀ ಮಹಿಷಮರ್ದಿನೀ ದೇವಿಗೆ ನೂತನ ಬ್ರಹ್ಮರಥ ಸಮರ್ಪಣೆ

ನೀಲಾವರ: ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ ಶ್ರೀ ಕ್ಷೇತ್ರ ನೀಲಾವರದ ಮಹಿಷಮರ್ದಿನೀ ದೇವಿಗೆ ನೀಲಾವರ ಮಕ್ಕಿತೋಟ ಮನೆಯ ಶ್ರೀಮತಿ ಗೌರಿ ವಿಠಲ ಶೆಟ್ಟಿ ಮತ್ತು ಮಕ್ಕಳು, ಮನೆಯವರು ಹಾಗೂ ಕುಟುಂಬಸ್ಥರು ಸೇವಾ ರೂಪವಾಗಿ ನೂತನ ಬ್ರಹ್ಮರಥವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಮರ್ಪಿಸುವ ಕಾರ್ಯಕ್ರಮ ಜರಗಲಿದೆ.

ನೂತನ ಬ್ರಹ್ಮರಥದ ಪುರಪ್ರವೇಶ ಫೆ. 27 ರಂದು ಸಂಜೆ 4 ಗಂಟೆಗೆ ನೂತನ ಬ್ರಹ್ಮರಥದ ಲೋಕಾರ್ಪಣೆ ನಡೆಯಲಿದೆ. ಮಾರ್ಚ್ 13 ವಿಶೇಷ ರಥೋತ್ಸವ.  ಫೆ.  27 ರಂದು ನೂತನ ಬ್ರಹ್ಮರಥದ ಪುರ ಪ್ರವೇಶದಂದು  ಅಪರಾಹ್ನ 2.00ಕ್ಕೆ ಕೋಟೇಶ್ವರದ ಗೋಪಾಡಿಯ ಶಿಲ್ಪಿಗಳಾದ ಪ್ರಭಾಕರ ಆಚಾರ್ಯ ಮತ್ತು ಕೃಷ್ಣಯ್ಯ ಆಚಾರ್ಯರವರ ಶ್ರೀ ಕಾಳಿಕಾಂಬ ಶಿಲ್ಪಕಲಾದಿಂದ ಬ್ರಹ್ಮರಥದ ಭವ್ಯ ಮೆರವಣಿಗೆಯು ಪ್ರಾರಂಭಗೊಂಡು ಆನೆಗುಡ್ಡೆ, ತೆಕ್ಕಟ್ಟೆ, ಕೋಟ, ಸಾಲಿಗ್ರಾಮ, ಸಾಸ್ತಾನ, ಬ್ರಹ್ಮಾವರ, ಕುಂಜಾಲು ಶ್ರೀ ರಾಮ ಮಂದಿರದ ಮಾರ್ಗವಾಗಿ ನೀಲಾವರ ಕ್ರಾಸ್ ಗೆ ವಾಹನಗಳ ಮೂಲಕ ತಲುಪುವುದು.

ಸಂಜೆ 4 ಗಂಟೆಗೆ ನೀಲಾವರ ಕ್ರಾಸ್ ನಿಂದ ಕಾಲ್ನಡಿಗೆ ಮತ್ತು ಭವ್ಯ ವಾಹನದೊಂದಿಗೆ ಸಂಘ ಸಂಸ್ಥೆ, ಊರ ಪರವೂರ ಭಕ್ತಾದಿಗಳು ವಿವಿಧ ಭಜನಾ ತಂಡಗಳೊಂದಿಗೆ, ವೇಷ ಭೂಷಣ, ಚೆಂಡೆ ವಾದನಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ನೂತನ ಬ್ರಹ್ಮ ರಥವನ್ನು ತರಲಾಗುವುದು.

ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಧ್ಯಕ್ಷರು ಮತ್ತು ಸದಸ್ಯರು ವ್ಯವಸ್ಥಾಪನ ಸಮಿತಿ, ಕಾರ್ಯನಿರ್ವಾಹಣಾಧಿಕಾರಿ ಅರ್ಚಕರು, ಉಪಾದಿವಂತರು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು,  ಶ್ರೀಮತಿ ಗೌರಿ ವಿಠಲ ಶೆಟ್ಟಿ ಮತ್ತು ಮಕ್ಕಳು, ಮನೆಯವರು ಹಾಗೂ ಕುಟುಂಬಸ್ಥರು ನೀಲಾವರ ಮಕ್ಕಿತೋಟ ಮನೆ ನೈಲಾಡಿ ಚಾವಡಿ ಮನೆಯವರು ಹಾಗೂ ಚೇರ್ಕಾಡಿ ನಡುಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.