udupixpress
Home Trending ಮತ್ತೆ ಬೆಳ್ಳಿತೆರೆಯ ಮೇಲೆ ಬರ್ತಿದ್ದಾರೆ ಕಮಲ್ ಹಾಸನ್: ಯಾವುದು ಕಮಲ್ ಹೊಸ ಚಿತ್ರ?

ಮತ್ತೆ ಬೆಳ್ಳಿತೆರೆಯ ಮೇಲೆ ಬರ್ತಿದ್ದಾರೆ ಕಮಲ್ ಹಾಸನ್: ಯಾವುದು ಕಮಲ್ ಹೊಸ ಚಿತ್ರ?

ಖ್ಯಾತ ನಟ, ರಾಜಕಾರಣಿ ಕಮಲ್ ಹಾಸನ್ ಮತ್ತೆ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಇಷ್ಟು ದಿನ  ಚಿತ್ರರಂಗದಿಂದ ಒಂದಷ್ಟು ದೂರವಿದ್ದ ಕಮಲ್, ಈಗ ಮತ್ತೆ ಬಣ್ಣ ಹಚ್ಚುತ್ತಿರುವ ಚಿತ್ರದ ಹೆಸರಿನ್ನೂ ಬಯಲಾಗಿಲ್ಲ. ಆದರೆ ಕಮಲ್ ಟ್ವೀಟ್ ನಲ್ಲಿ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಕಮಲ್ ಈ ಬಗ್ಗೆ ಟ್ವೀಟ್ ಮಾಡುತ್ತಾ “ಮತ್ತೊಂದು ಪ್ರಯಾಣ ಪ್ರಾರಂಭವಾಗುತ್ತಿದೆ” ಎಂದು ಹೇಳಿದ್ದಾರೆ.

ಅವರು ಹಂಚಿಕೊಂಡಿರೋ ಪೋಸ್ಟರ್‌ನಲ್ಲಿ ಬಂದೂಕುಗಳಿಂದ ಮಾಡಿದ ಚಿತ್ರವಿದೆ. ಜತೆಗೆ “Once upon a time there lived a ghost…” ಎನ್ನುವ ಟ್ಯಾಗ್ ಲೈನ್ ಗಮನ ಸೆಳೆಯುತ್ತಿದೆ.

ಕಮಲ್ ಹಾಸನ್ ಅವರ ಸ್ವಂತ ಬ್ಯಾನರ್  ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್  ಈ ಚಿತ್ರವನ್ನು ನಿರ್ಮಿಸಲಿದೆ ಎನ್ನಲಾಗಿದೆ.