ಎಲೆಕ್ಟ್ರಿಕ್ ಕಾರು ಆಮದು ಸುಂಕ ಶೇ.‌15ಕ್ಕೆ ಇಳಿಕೆ.

ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿ ಸುವ ಯೋಜನೆಯಡಿಯಲ್ಲಿ ಎಚ್‌. ಡಿ. ಕುಮಾರಸ್ವಾಮಿ ಸಚಿವರಾಗಿರುವ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾ ಲಯ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

‘ಕಂಪೆನಿಗಳು ಸ್ಥಳೀಯ ಉತ್ಪಾ ದನಾ ಸೌಲಭ್ಯಗಳನ್ನು ಸ್ಥಾಪಿಸಲು 4,150 ಕೋಟಿ ರೂ. ಹೂಡಿಕೆ ಮಾಡಿದರೆ, ಅವರಿಗೆ ವಾರ್ಷಿಕವಾಗಿ 8,000 ಎಲೆಕ್ಟ್ರಿಕ್ ಕಾರ್‌ಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಅರ್ಜಿ ಅನುಮೋದನೆ ದಿನಾಂಕದಿಂದ 5 ವರ್ಷಗಳ ಅವಧಿಗೆ, ಪ್ರಸ್ತುತ ಇರುವ ಶೇ.70-100 ಆಮದು ಸುಂಕದ ಬದಲಿಗೆ ಕೇವಲ ಶೇ.15ರಷ್ಟು ಕಡಿಮೆ ಆಮದು ಸುಂಕವನ್ನು ವಿಧಿಸಲಾಗುವುದು’ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ಮಾ.15ರಂದು ಯೋಜನೆಯನ್ನು ಪ್ರಕಟಿಸಲಾಗಿತ್ತು. ಸೋಮವಾರ ಬೃಹತ್ ಕೈಗಾರಿಕಾ ಸಚಿವಾಲಯ ವಿಸ್ತೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿಗಳು ಹೆಸರು ನೋಂದಾಯಿಸಿಕೊಳ್ಳಲು ಇನ್ನು 120 ದಿನಗಳ ಒಳಗೆ ಅರ್ಜಿ ಸ್ವೀಕೃತಿಯನ್ನು ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.