ಟಾಸ್​ ಗೆದ್ದು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ : ಐಸಿಸಿ ಏಕದಿನ ವಿಶ್ವಕಪ್

ಚೆನ್ನೈ(ತಮಿಳುನಾಡು): ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಗಿವೆ. ​​ಟಾಸ್​ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬೌಲಿಂಗ್​​ ಆಯ್ಕೆ ಮಾಡಿಕೊಂಡರು. ಎದುರಾಳಿ ನಾಯಕ ಶಾಕಿಬ್ ಅಲ್ ಹಸನ್ ಮುಂದಾಳತ್ವದ ಬಾಂಗ್ಲಾ ತಂಡ ಬ್ಯಾಟಿಂಗ್​ಗೆ ಮುಂದಾಗಿದೆಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಚೆನ್ನೈನ ಚಿದಂಬರಂ ಮೈದಾನ ಆತಿಥ್ಯ ವಹಿಸಿಕೊಂಡಿದೆ.

ಅಫ್ಘಾನಿಸ್ತಾನ ವಿರುದ್ಧ ಮೊದಲ ನಿರಾಯಾಸ ಗೆಲುವು ಕಂಡ ಬಾಂಗ್ಲಾ, ತನ್ನ ಎರಡನೇ ಪಂದ್ಯವಾದ ಇಂಗ್ಲೆಂಡ್‌ ವಿರುದ್ಧ 137 ರನ್‌ಗಳಿಂದ ಸೋತಿದೆ. ಇದೀಗ ಮೂರನೇ ಪಂದ್ಯದಲ್ಲಿ ಯಶಸ್ವಿ ಕಿವೀಸ್‌ ತಂಡವನ್ನು ಮಣಿಸಿ ಗೆಲುವಿನ ಹಳಿಗೆ ಮರಳಲು ತಂತ್ರ ರೂಪಿಸಿದೆ. ಹಾಗಾಗಿ ಇಂದಿನ ಪಂದ್ಯ ಕುತೂಹಲ ಕೆರಳಿಸಿದೆ. ಉಭಯ ತಂಡಗಳು ಉತ್ತಮ ಸ್ಪಿನ್ನರ್​ಗಳನ್ನು ಹೊಂದಿದ್ದು, ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿವೆ.

.ವಿಶ್ರಾಂತಿಯಲ್ಲಿದ್ದ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಆಗಮನಿಂದ ನ್ಯೂಜಿಲೆಂಡ್ ತಂಡಕ್ಕೆ ಮತ್ತಷ್ಟು ಬಲ ಬಂದಿದೆ. ಸತತ ಎರಡು ಭರ್ಜರಿ ಗೆಲುವುಗಳೊಂದಿಗೆ ಏಕದಿನ ವಿಶ್ವಕಪ್​ನ ಅಭಿಯಾನ ಆರಂಭ ಮಾಡಿರುವ ನ್ಯೂಜಿಲೆಂಡ್, ಇಂದಿನ ಪಂದ್ಯವನ್ನು ಸಹ ವಶಕ್ಕೆ ತೆಗೆದುಕೊಳ್ಳುವ ಉತ್ಸಾಹದಲ್ಲಿದೆ. ಗೆದ್ದರೆ ಹ್ಯಾಟ್ರಿಕ್‌ ಆಗಲಿದೆ. ಬಾಂಗ್ಲಾದೇಶ ಅದಕ್ಕೆ ಅವಕಾಶ ಮಾಡಿಕೊಡಬಲ್ಲದೇ ಅನ್ನೋದನ್ನು ಕಾದು ನೋಡಬೇಕಿದೆ.

.ಆಡುವ 11ರ ಬಳಗ: ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್​ ಕೀಪರ್​), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್. ಬೆಂಚ್ – ವಿಲ್ ಯಂಗ್, ಇಶ್ ಸೋಧಿ, ಜೇಮ್ಸ್ ನೀಶಮ್, ಟಿಮ್ ಸೌಥಿ.

ಬಾಂಗ್ಲಾದೇಶ ತಂಡ: ಲಿಟ್ಟನ್ ದಾಸ್, ತಂಝಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್​ ಕೀಪರ್​), ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್. ಬೆಂಚ್ – ಹಸನ್ ಮಹಮೂದ್, ತಂಜಿಮ್ ಹಸನ್ ಸಾಕಿಬ್, ನಸುಮ್ ಅಹ್ಮದ್, ಮಹೇದಿ ಹಸನ್ಸ್ವಲ್ಪ ಗೊಂದಲವಿತ್ತು. ಮೊದಲು ಬ್ಯಾಟಿಂಗ್ ಮಾಡಲು ಇಷ್ಟವಿರಲಿಲ್ಲ. ಆದರೂ ಉತ್ಸಾಹದಿಂದ ಕಣಕ್ಕಿಳಿಯುವುದಾಗಿ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಹೇಳಿದರೆ, ನಾವು ಮೊದಲು ಬೌಲ್ ಮಾಡುತ್ತೇವೆ. ಎಂದಿನಂತೆ ಆಟಗಾರರು ಉತ್ಸಾಹದಲ್ಲಿದ್ದಾರೆ ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತಮ್ಮ ಆಯ್ಕೆ ಬಗ್ಗೆ ಹೇಳಿಕೊಂಡರು