ಹೊಸ ವರ್ಷದ ಸಂಭ್ರಮ: ವಿಶೇಷವಾಗಿ ಅಲಂಕಾರಗೊಂಡ ಧರ್ಮಸ್ಥಳ ಕ್ಷೇತ್ರ

ಮಂಗಳೂರು: ಹೊಸ ವರ್ಷದ ಮೊದಲ ದಿನವಾದ ಇಂದು‌ ಕರಾವಳಿಯ ಪುಣ್ಯ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆಯಲು ನಾಡಿನೆಲ್ಲೆಡೆಯಿಂದ ಆಗಮಿಸಿದ್ದಾರೆ.
ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೂ ಭಕ್ತರು ಆಗಮಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ವಿಶೇಷವಾಗಿ ಹೂಗಳಿಂದ ಸಿಂಗರಿಸಲಾಗಿದೆ. ಕಳೆದ ೧೨ ವರ್ಷಗಳಿಂದ ಬೆಂಗಳೂರಿನ ಹಂದ್ರಲೇಔಟ್ ನಿವಾಸಿಗಳಾಗ ಸಾಯಿ ಸರವಣ, ಗೋಪಾಲ ರಾವ್ ಹಾಗೂ ಆನಂದ ಮಂಜುನಾಥ ರಾವ್ ದೇವಸ್ಥಾನವನ್ನು ಹೊಸ ವರ್ಷದ ದಿನ ಸೇವಾರ್ಥವಾಗಿ ದೇಗುಲವನ್ನು ಅಲಂಕಾರ ಮಾಡುತ್ತಿದ್ದಾರೆ.
ಕಬ್ಬು ಭತ್ತದ ತೆನೆ, ದಾಳಿಂಬೆ ಅನಾನಸು ಬಾಳೆದಿಂಡು, ತಾವರೆ, ಲಿಲಿಯಂ ಹೀಗೆ ವಿವಿಧ ಹೂಗಳು ಸಹಿತ ಒಟ್ಟು ಆರು ಲೋಡ್ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸಿಕೊಂಡು, ದೇಗುಲದ ಹೊರಾಂಗಣ ದ್ವಾರ, ಸುತ್ತುಪೌಳಿ ಸುತ್ತ ಪೌಳಿ ಛಾವಣಿ ಸ್ತಂಭಗಳನ್ನು ಸಿಂಗರಿಸಲಾಗಿದೆ.. ವಿಶೇಷವಾಗಿ ಅಲಂಕಾರಗೊಂಡ ದೇಗುಲವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.