udupixpress
Home Trending ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಮೃತದೇಹವನ್ನು ಆಸ್ಪತ್ರೆಗೆ ಕರೆತಂದ ವೇಳೆ ಸುಶಾಂತ್...

ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಮೃತದೇಹವನ್ನು ಆಸ್ಪತ್ರೆಗೆ ಕರೆತಂದ ವೇಳೆ ಸುಶಾಂತ್ ಸಿಂಗ್ ಒಂದು ಕಾಲು ಮುರಿದಿತ್ತು.?

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಸುಶಾಂತ್‌ ಸಿಂಗ್‌ ಮೃತದೇಹವನ್ನು ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಅವರ ಒಂದು ಕಾಲು ಮುರಿದಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮುಂಬೈನ ಕೂಪರ್ ಆಸ್ಪತ್ರೆಗೆ ಸುಶಾಂತ್ ಸಿಂಗ್ ಮೃತದೇಹ ಕರೆತಂದ ವೇಳೆ ಅವರ ಒಂದು ಕಾಲು ಮುರಿದಿತ್ತು. ಶವ ಪರಿಶೀಲಿಸಿದ್ದ ಹಿರಿಯ ವೈದ್ಯರು ದೇಹದಲ್ಲಿರುವ ಗಾಯದ ಗುರುತುಗಳನ್ನು ನೋಡಿ ಇದು ಕೊಲೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಪೊಲೀಸರು ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು. ಹೀಗೆಂದು ಕೂಪರ್‌ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ‘ನ್ಯೂಸ್‌ ನೇಷನ್‌’ಗೆ ನೀಡಿದ ಸಂದರ್ಶನದ ತುಣುಕೊಂದನ್ನು ಸುಶಾಂತ್‌ ಸಿಂಗ್‌ ಸಹೋದರಿ ಶ್ವೇತಾ ಸಿಂಗ್‌ ಕೀರ್ತಿ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಶಾಂತ್‌ ಮಾಜಿ ಪ್ರೇಯಸಿ, ನಟಿ ರಿಯಾ ಚಕ್ರವರ್ತಿಯನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು (ಇ.ಡಿ) ವಿಚಾರಣೆ ನಡೆಸುತ್ತಿದೆ.

 

error: Content is protected !!