ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಹೊಸ ವೇಳಾಪಟ್ಟಿ ಪ್ರಕಟ

ಬೆಂಗಳೂರು: ನಿತ್ಯ ಮಧ್ಯಾಹ್ನ ಸುಬ್ರಹ್ಮಣ್ಯದಿಂದ ಹೊರಡುವ ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಸಮಯವನ್ನು ಪರಿಷ್ಕರಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದ್ದು, ಡಿ.6 ರಿಂದ ಜಾರಿಗೆ ಬಂದಿದೆ.

ಈ ಹಿಂದೆ ಮಧ್ಯಾಹ್ನ 1.30ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣದಿಂದ ಹೊರಡುತ್ತಿದ್ದ ರೈಲು ಮಧ್ಯಾಹ್ನ 3.03 ಗಂಟೆಗೆ ಬಂಟ್ವಾಳ ನಿಲ್ದಾಣ ತಲುಪುತ್ತಿತ್ತು.

ಡಿ. 6 ರಿಂದ ಜಾರಿಯಾದ ಹೊಸ ವೇಳಾಪಟ್ಟಿಯ ಪ್ರಕಾರ ಮಧ್ಯಾಹ್ನ 1.45 ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣದಿಂದ ಮಂಗಳೂರು ರೈಲು ಹೊರಡಲಿದೆ. ಬಜಕೆರೆ ನಿಲ್ದಾಣದಿಂದ 1.54, ಕೋಡಿಂಬಾಳದಿಂದ 2.01, ಎಡಮಂಗಲದಿಂದ 2.09, ಕಾಣಿಯೂರಿನಿಂದ 2.19, ನರಿಮೊಗರುವಿನಿಂದ 2.31, ಕಬಕ ಪುತ್ತೂರಿನಿಂದ 2.47, ನೇರಳಕಟ್ಟೆಯಿಂದ 3.02 ಮತ್ತು ಬಂಟ್ವಾಳದಿಂದ 3.22 ಕ್ಕೆ ಹೊರಡಲಿದೆ.