ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಒಟಿಪಿಯಲ್ಲದೇ ಎರಡು ಹಂತದ ದೃಢೀಕರಣದ ಮಾನದಂಡವನ್ನು ಅನುಸರಿಸುವಂತೆ 2026ರ ಏಪ್ರಿಲ್ 1ರಂದು ಜಾರಿಗೊಳಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಗುರುವಾರ(ಸೆ.24) ಘೋಷಿಸಿದೆ.
ಇದೀಗ ಪ್ರಸ್ತುತ, ಸದ್ಯದ ಎಲ್ಲಾ ಡಿಜಿಟಲ್ ಪಾವತಿಗಳು ಹೆಚ್ಚುವರಿ ಅಂಶವಾಗಿ SMS ಆಧಾರಿತ ಒಂದು-ಬಾರಿ ಪಾಸ್ವರ್ಡ್ಗಳನ್ನು (OTP ಗಳು) ಮಾತ್ರ ಅವಲಂಬಿಸಿವೆ. 2026ರ ಏಪ್ರಿಲ್ 1ರಿಂದ ಒಟಿಪಿ ಜತೆ ಎರಡು ಹಂತದ ದೃಢೀಕರಣವನ್ನು ಕಡ್ಡಾಯಗೊಳಿಸಲಿದೆ.
ಆರ್ಬಿಐ ನಿರ್ದಿಷ್ಟ ವಿಧಾನಗಳನ್ನು ಕಡ್ಡಾಯಗೊಳಿಸದಿದ್ದರೂ, ಸಾಮಾನ್ಯವಾಗಿ ಬಳಕೆದಾರರಿಗೆ ತಿಳಿದಿರುವ ಪಾಸ್ವರ್ಡ್, ಪಿನ್, ಕಾರ್ಡ್, ಫಿಂಗರ್ಪ್ರಿಂಟ್ ಅಥವಾ ಆಧಾರ್ ಆಧಾರಿತ ಪರಿಶೀಲನೆಯಂತಹ ಬಯೋಮೆಟ್ರಿಕ್ ಗುರುತಿಸುವಿಕೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಆರ್ಬಿಐ ಹೇಳಿದೆ.(ಇದರಲ್ಲಿ ಯಾವುದಾದರೂ ಎರಡು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ).
“ವಹಿವಾಟಿಗೆ ಸಂಬಂಧಿಸಿದಂತೆ ಅಪಾಯದ(ಭದ್ರತೆ) ಆಧಾರದ ಮೇಲೆ, ಕನಿಷ್ಠ ಎರಡು ಅಂಶಗಳ ದೃಢೀಕರಣವನ್ನು ಮೀರಿದ ಹೆಚ್ಚುವರಿ ಪರಿಶೀಲನೆಗಳನ್ನು ಆಶ್ರಯಿಸಬಹುದು” ಎಂದು ಆರ್ಬಿಐ ಹೊಸ ಸುತ್ತೋಲೆಯಲ್ಲಿ ತಿಳಿಸಿದೆ.


















