ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ: ನೈಟ್ ಕರ್ಪ್ಯೂ ತೆರವು, ಜಿಮ್ ತೆರೆಯಲು ಅವಕಾಶ

ನವದೆಹಲಿ: ಕೇಂದ್ರ ಸರ್ಕಾರವು ಕೊರೊನಾ ತಡೆಗೆ ಸಂಬಂಧಿಸಿದಂತೆ ಹೇರಿದ್ದ ಬಹುತೇಕ ನಿರ್ಬಂಧಗಳನ್ನು‌ ತೆರವುಗೊಳಿಸಿ, ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಂತೆ ಆಗಸ್ಟ್ 5ರಿಂದ ಜಿಮ್, ಯೋಗ ಕೇಂದ್ರಗಳನ್ನು ಒಪನ್ ಮಾಡಲು ಅವಕಾಶ ನೀಡಲಾಗಿದೆ.
ಪ್ರಸ್ತುತ ಜಾರಿಯಲ್ಲಿದ್ದ ನೈಟ್ ಕರ್ಪ್ಯೂಯನ್ನು ತೆರವುಗೊಳಿಸಿದೆ. ಹಾಗಾಗಿ ಆಗಸ್ಟ್ 1ರಿಂದ ನೈಟ್ ಕರ್ಪ್ಯೂ ಇರುವುದಿಲ್ಲ.
ಆಗಸ್ಟ್ 31ರ ವರೆಗೆ ಶಾಲಾ-ಕಾಲೇಜು ತೆರೆಯುವಂತಿಲ್ಲ:
ಹೊಸ ಮಾರ್ಗಸೂಚಿಯಲ್ಲಿ ಶಾಲಾ ಕಾಲೇಜು ತೆರೆಯಲು ಅವಕಾಶ ನೀಡಿಲ್ಲ. ಆಗಸ್ಟ್ 31ರ ವರೆಗೂ ಶಾಲಾ ಕಾಲೇಜುಗಳನ್ನು ಆರಂಭಿಸಬಾರದು ಎಂದು‌ ಆದೇಶ ನೀಡಿದೆ.
ಚಿತ್ರಮಂದಿರ, ಈಜು ಕೊಳ, ಮೆಟ್ರೋ ಬಂದ್:
ಈ ಹಿಂದಿನ ಮಾರ್ಗಸೂಚಿಯಂತೆ ಚಿತ್ರಮಂದಿರ, ಈಜು ಕೊಳ, ಮೆಟ್ರೋ ಮೇಲಿನ ನಿರ್ಬಂಧ ಮುಂದುವರಿಯಲಿದೆ. ರಾಜಕೀಯ, ಸಭೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗಳಿಗೂ ಸದ್ಯಕ್ಕೆ ಅನುಮತಿಯಿಲ್ಲ.