ಪ್ರೀತಿಸುವ ಹೃದಯಗಳ ಜೊತೆಗಿದ್ದಾನೆ “LOVE ಗುರು”: ಲವ್ ಕುರಿತ ಪ್ರಶ್ನೆ ಕಳುಹಿಸಿ, ಬದುಕನ್ನೇ ಬದಲಿಸೋ ಉತ್ತರ ಪಡೆಯಿರಿ

ಪ್ರೀತಿಸುವ ಸುಖಕ್ಕಿಂತಲೂ ಬೇರೆ ಸುಖವಿಲ್ಲ. ನಾವು ಪ್ರೀತಿಸಿದ ವ್ಯಕ್ತಿಗಳೇ ನಮ್ಮ ಸಂಗಾತಿಯಾಗಿ ಬಂದ್ರೆ ಅದು ಎಲ್ಲವನ್ನೂ ಮೀರಿದ ಖುಷಿ ಎನ್ನುವುದು ಪ್ರೀತಿ ಮಾಡುವವರ ಆಸೆ. ಸುದ್ದಿ ಮತ್ತು ಮನೋರಂಜನಾ ಜಾಲತಾಣದ ಜಗತ್ತಲ್ಲಿ ಈಗಾಗಲೇ ತನ್ನದೇ ಒಂದು ವೇಗದಲ್ಲಿ, ಹೊಸ ಹುರುಪಲ್ಲಿ ಸಾಗುತ್ತಿರುವ ಉಡುಪಿ X press  ಜಾಲತಾಣ, LOVE ಗುರು ಎನ್ನುವ ಹೊಸ ಯೋಜನೆಯೊಂದನ್ನು ಶುರು ಮಾಡಿದೆ.

“ಅವಳಂದ್ರೆ ನಂಗಿಷ್ಟ, ಅವಳನ್ನು ಪ್ರೀತಿಸ್ತಾ ಇದ್ದೇನೆ. ಆದ್ರೆ ಇದನ್ನು ಅವಳಿಗೆ ಹೇಳೋದೇಗೆ? ಎಂದು ಕೊನೆಗೂ ತನ್ನ ಮನದ ಆಸೆಯನ್ನು ಆ ಹುಡುಗಿಯ ಹತ್ತಿರ ನಿವೇದಿಸಿಕೊಳ್ಳಲಾಗದ ಹುಡುಗರಿದ್ದಾರೆ. “ಅವನೇ ನನ್ನ ರಾಜಕುಮಾರ, ಆದರೆ ನಾನಾಗೇ ಅವನಿಗೆ ಪ್ರಪೋಸ್ ಮಾಡೋಕೆ ಭಯ ಆಗ್ತಿದೆ” ಎನ್ನುತ್ತಾ ಕೊನೆಗೂ ತಮ್ಮ ಪ್ರೀತಿಯನ್ನು ಮನಸ್ಸಲ್ಲೇ ಮುಚ್ಚಿಟ್ಟುಕೊಳ್ಳುವ ಹುಡುಗಿಯರಿದ್ದಾರೆ. ಇವರನ್ನೆಲ್ಲಾ ಉದ್ದೇಶದಲ್ಲಿಟ್ಟುಕೊಂಡು ನಾವು LOVE ಗುರು  ಅನ್ನೋ ಹೊಸ ಥೀಮ್ ಆರಂಭಿಸಿದ್ದೇವೆ. ಪ್ರೀತಿ ಮಾಡುವಾಗ ನಿಮ್ಮಲ್ಲಿ ಕಾಡುವ ಸಂದೇಹ, ಪ್ರಶ್ನೆಗಳಿಗೆ ನಾವಿಲ್ಲಿ ಉತ್ತರ ನೀಡುತ್ತೇವೆ. ನೀವು ಪ್ರೀತಿಸುತ್ತಿರುವ ವ್ಯಕ್ತಿಯನ್ನು ಹೇಗೆ ಪ್ರಪೋಸ್ ಮಾಡಬಹುದು? ಅವರನ್ನು ಸೆಳೆಯೋದು ಹೇಗೆ? ಅರ್ಧದಲ್ಲೇ ಮುರಿದು ಬಿದ್ದ ನಮ್ಮ ಸಂಬಂಧಕ್ಕೆ ಮರುಚಾಲನೆ ನೀಡೋದು ಹೇಗೆ? ಇತ್ಯಾದಿ ಯಾವ ಪ್ರಶ್ನೆಗಳೇ ಆಗಿರಲಿ ಅದಕ್ಕೆ  LOVE ಗುರು ಉತ್ತರಿಸುತ್ತಾನೆ.

ನಿಮ್ಮ ಪ್ರಶ್ನೆಗಳ್ನು ಸಂಕ್ಷಿಪ್ತವಾಗಿ ಇಂಗ್ಲೀಷ್, ಕನ್ನಡ, ತುಳು, ಯಾವ ಭಾಷೆಯಲ್ಲಿ ಬೇಕಾದರೂ ಬರೆದು ನಮಗೆ ಕಳುಹಿಸಿ. ನೀವು ಪ್ರೀತಿಸುವ ವ್ಯಕ್ತಿಯ ಗುಣಗಳು, ಅವನ / ಅವಳ ನಿರೀಕ್ಷೆ, ಕನಸು ಇತ್ಯಾದಿಗಳನ್ನೂ  ಪ್ರಶ್ನೆಯಲ್ಲಿ ತಿಳಿಸಿದರೆ ನಮಗೆ ಉತ್ತರಿಸೋದು ಸುಲಭ. ನಿಮ್ಮ ಹೆಸರನ್ನು ಗೌಪ್ಯವಾಗಿಡಬೇಕು ಎಂದು ನೀವು ಬಯಸಿದರೂ ಸರಿಯೇ. ನಿಮ್ಮ ಪ್ರಶ್ನೆಗೆ ಉತ್ತರ ಕೊಡೋದಷ್ಟೇ ನಮ್ಮ ಜವಾಬ್ದಾರಿ. ಪ್ರಶ್ನೆ ಕಳುಹಿಸಲು ವಯಸ್ಸಿನ ಮಿತಿಯಿಲ್ಲ. ಯಾರೂ ಬೇಕಾದರೂ ಕಳುಹಿಸಬಹುದು. ನಿಮ್ಮದು ನಿಜವಾದ ಪ್ರೀತಿಯಾದಲ್ಲಿ, ನಿಮ್ಮ ಶುದ್ದ ಮನಸ್ಸಿನ ಪ್ರೀತಿಗೆ ನಮ್ಮ LOVE ಗುರು ಜೊತೆಯಾಗುತ್ತಾರೆ.

ನಿಮ್ಮ ಪ್ರಶ್ನೆಗಳನ್ನು ವಾಟ್ಯಾಪ್, ಇ-ಮೇಲ್, ಫೇಸ್ಬುಕ್ ಮೆಸೆಂಜರ್ ಗಳಲ್ಲಿ ಕಳುಹಿಸಬಹುದು.

whatsapp: 9591650840

E-mail:newsudupixpress@gmail.com

facebook:Udupixpress.com