ಕಾರ್ಕಳ: ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣಾ ಸಮಾರಂಭ ಮತ್ತು ಶ್ರೀ ಮನ್ಮಹಾರಥೋತ್ಸವವು ಏ.14 ರಿಂದ ಏ. 20 ರವರೆಗೆ ನಡೆಯಲಿರುವುದು.
ದಿನಾಂಕ 15.04.2023ನೇ ಶನಿವಾರದಿಂದ ದಿನಾಂಕ 20.04.2023ನೇ ಶುಕ್ರವಾರದವರೆಗೆ
ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯತಕ್ಕ ಧ್ವಜಾರೋಹಣ ಮೊದಲ್ಗೊಂಡು ನೂತನ ರಥ ಸಮರ್ಪಣೆ ಮತ್ತು ಶ್ರೀ ಮನ್ಮಹಾರಥೋತ್ಸವ ಕೊರಂಗ್ರಪಾಡಿ ಶ್ರೀ ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಜರಗಲಿರುವುದು.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳಾದ ತಾವೆಲ್ಲರೂ ತಮ್ಮ ಬಂಧು ಮಿತ್ರರೊಡಗೂಡಿ ಆಗಮಿಸಿ, ಶ್ರೀ ದೇವತಾ ಕಾರ್ಯದಲ್ಲಿ ಭಾಗಿಗಳಾಗಿ, ತನು ಮನ ಧನಗಳಿಂದ ಸಹಕರಿಸಿ, ದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಶ್ರೀ ವೆಂಕಟರಮಣ ಭಟ್ ಅರ್ಚಕರು ಮತ್ತು ಪರಿಚಾರಕ ವರ್ಗ
ಶ್ರೀ ಶಿವರಾಮ ಜಿ. ಶೆಟ್ಟಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ವ್ಯವಸ್ಥಾಪನಾ ಸಮಿತಿ ಸರ್ವ ಸದಸ್ಯರು ಹಾಗೂ ಮರ್ಣೆ ಗ್ರಾಮಸ್ಥರು
ರಥೋತ್ಸವದ ಕಾರ್ಯಕ್ರಮಗಳ ವಿವರ
ದಿನಾಂಕ 14-4-2023 ಶುಕ್ರವಾರ
ಸಾಯಂಕಾಲ ಗಂಟೆ 6.00ರಿಂದ ನಿತ್ಯ ಬಲಿ, ಅಂಕುರಾರ್ಪಣೆ, ಅಂಕುರಬಲಿ, ರಂಗ ಪೂಜೆ
ದಿನಾಂಕ 15-04-2023 ಶನಿವಾರ
ಬೆಳಿಗ್ಗೆ ಸ್ವಸ್ತಿವಾಚನ, ಉಗ್ರಾಣಮುಹೂರ್ತ, ಬೆಳಿಗ್ಗೆ ಗಂಟೆ 11.05 ಕ್ಕೆ ಧ್ವಜಾರೋಹಣ, ಗಣ ಹೋಮ ಮಹಾಪೂಜೆ,
ರಾತ್ರಿ ಆರಾಧನಾ ಪೂಜೆ, ಆರಾಧನಾ ಬಲಿ, ರಂಗ ಪೂಜೆ
ಶ್ರೀ ದಿವಾಕರ ವೈ. ಶೆಟ್ಟಿ ಹಾಗೂ ಕುಟುಂಬಸ್ಥರು ಮುನಿಯಲುಬೈಲು ಇವರ ಸೇವೆ.
ಸಾಯಂಕಾಲ ಗಂಟೆ 7.00 ರಿಂದ ಶ್ರೀ ವಿಷ್ಣುಮೂರ್ತಿ ದುರ್ಗಾಪರಮೇಶ್ವರೀ ಯಕ್ಷಗಾನ (ರಿ.) ಅಜೆಕಾರು ಇವರಿಂದ ಯಕ್ಷಗಾನ ಸೇವೆಯಾಟ “ವೀರ ಬಬ್ರುವಾಹನ – ಮಹರ್ಷಿ ವಾಲ್ಮೀಕಿ”
ದಿನಾಂಕ 16-04-2023 ರವಿವಾರ
ಬೆಳಿಗ್ಗೆ ಕಲಶಾಭಿಷೇಕ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿದಾನ, ಮಹಾಪೂಜೆ
ಸಾಯಂಕಾಲ ಗಂಟೆ 4.30 ರಿಂದ ಅಜೆಕಾರು ಶ್ರೀರಾಮಮಂದಿರದಿಂದ ನೂತನ ರಥ ವಿವಿಧ ವಾದ್ಯ ಘೋಷಗಳೊಂದಿಗೆ ಪುರಮೆರವಣಿಗೆಯಲ್ಲಿ ತರುವುದು.
ರಾತ್ರಿ ಆರಾಧನಾ ಪೂಜೆ, ಮಹಾಪೂಜೆ, ನಿತ್ಯ ಬಲಿ, ರಂಗ ಪೂಜೆ, ಶ್ರೀ ಭೂತ ಬಲಿ
ದಿನಾಂಕ 17-04-2023 ಸೋಮವಾರ
ಬೆಳಿಗ್ಗೆ ಕಲಶಾಭಿಷೇಕ, ಶ್ರೀ ಸೂಕ್ತ ಪುರುಷ ಸೂಕ್ತ ಹೋಮ
ಮಧ್ಯಾಹ್ನ ಮಹಾಚಂಡಿಕಾ ಯಾಗ, ಮಹಾಪೂಜೆ
ಸಾಯಂಕಾಲ ಗಂಟೆ 3.30 ರಿಂದ ನೂತನ ರಥಕ್ಕೆ ವಾಸ್ತು ಪೂಜೆ, ವಾಸ್ತು ಬಲಿ
ಸಾಯಂಕಾಲ ಘಂಟೆ 5.30 ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ “ನೂತನ ಪ್ರಸಂಗ”
ದೇವಸ್ಯ ಶ್ರೀಮತಿ ಮತ್ತು ಶ್ರೀ ಶಿವರಾಮ ಜಿ. ಶೆಟ್ಟಿ ಮತ್ತು ಕುಟುಂಬಸ್ಥರ ಸೇವೆ.
ಸಾಯಂಕಾಲ ಗಂಟೆ 7.00 ರಿಂದ ನೂತನ ರಥ ಸಮರ್ಪಣಾ ಧಾರ್ಮಿಕ ಸಭಾ ಕಾರ್ಯಕ್ರಮ ಆಶೀರ್ವಚನ ಮತ್ತು ರಥ ಸಮರ್ಪಣೆ
ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠ
ರಾತ್ರಿ ಗಂಟೆ 9.00ಕ್ಕೆ ರಂಗ ಪೂಜೆ, ಶ್ರೀಮತಿ ಪ್ರತಿಮಾ ಮತ್ತು ಶ್ರೀ ಜಯ ಶೆಟ್ಟಿ ಮತ್ತು ಮಕ್ಕಳು ಕುಂಬ್ಳೆಬರಿ ಅಜೆಕಾರು ಇವರ ಸೇವೆ.
ರಾತ್ರಿ ಆರಾಧನಾ ಬಲಿ, ಉತ್ಸವ ಬಲಿ, ಕಟ್ಟೆ ಪೂಜೆ, ಮಹಾಪೂಜೆ
ದಿನಾಂಕ 18-04-2023 ಮಂಗಳವಾರ
ಬೆಳಿಗ್ಗೆ ಕಲಶಾಭಿಷೇಕ, ರಥಸಂಪೋಕ್ಷಣೆ, ಮಹಾಪೂಜೆ, ರಥಾರೋಹಣ, ಪಲ್ಲಪೂಜೆ
ಮಧ್ಯಾಹ್ನ ಗಂಟೆ 1.00 ರಿಂದ ಅನ್ನ ಸಂತರ್ಪಣೆ
ರಾತ್ರಿ ಗಂಟೆ 7.00 ರಿಂದ ರಥೋತ್ಸವ, ಕೆರೆ ದೀಪ, ಭೂತಬಲಿ, ಕವಾಟ ಬಂಧನ
ದಿನಾಂಕ 19-04-2023 ಬುಧವಾರ
ಬೆಳಿಗ್ಗೆ ಗಂಟೆ 7.00ಕ್ಕೆ ಕವಾಟೋದ್ಘಾಟನೆ, ಶ್ರೀ ವಿಷ್ಣು ಯಾಗ ಹಗಲು ರಥೋತ್ಸವ, ವಸಂತ ಪೂಜೆ ಕೆ. ಸೀತಾರಾಮ ಶೆಟ್ಟಿ ಮತ್ತು ಸಹೋದರ ಸಹೋದರಿಯರು, ಕುಂಠಿನಿ ಮನೆ ಇವರ ಸೇವೆ. ತುಲಾಭಾರ ಸೇವೆ, ಮಹಾಪೂಜೆ
ಅಪರಾಹ್ನ ಗಂಟೆ 2.30 ಕ್ಕೆ ದೈವಗಳ ಭಂಡಾರ ಇಳಿಯುವುದು.
ಸಾಯಂಕಾಲ ಗಂಟೆ 4 ರಿಂದ ದೈವಗಳ ಕೋಲ, ಅವಭೃತ ಸ್ನಾನ, ಕಟ್ಟೆ ಪೂಜೆ, ಧ್ವಜಾವರೋಹಣ, ಮಹಾಪೂಜೆ
ದಿನಾಂಕ 20-04-2023 ಗುರುವಾರ
ಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ
ರಾತ್ರಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಸಣ್ಣ ರಂಗ ಪೂಜೆ, ಮಾರಿ.