ಜೂನ್ 29 ರಂದು ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆ ಉದ್ಘಾಟನೆ

ಸಂತೆಕಟ್ಟೆ: ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಬೆಂಗಳೂರು ಇದರ ಪ್ರಥಮ ಶಾಖೆಯು ಕಲ್ಯಾಣಪುರ ಸಂತೆಕಟ್ಟೆಯ ಮೋಹಿನಿ ಟವರ್ ನ ಮಹಡಿಯಲ್ಲಿ ಕಾರ್ಯಾರಂಭಗೊಳ್ಳಲಿದ್ದು, ಕಚೇರಿಯ ಉದ್ಘಾಟನೆಯು ಜೂನ್ 29 ರಂದು ಬೆಳೆಇಗ್ಗೆ 10.30 ಕ್ಕೆ ನಡೆಯಲಿದೆ.

ಶಾಸಕ ಯಶ್ ಪಾಲ್ ಸುವರ್ಣ ಕಚೇರಿಯನ್ನು ಉದ್ಘಾಟಿಸಲಿದ್ದು, ಕೋಟ ಶ್ರೀನಿವಾಸ್ ಪೂಜಾರಿ, ಶಂಕರಪುರ ಸಾಯಿ ಸಾಂತ್ವನ ಮಂದಿರದ ಶ್ರೀ ಸಾಯಿ ಈಶ್ವರ ಗುರೂಜಿ, ಪ್ರಮೋದ್ ಮಧ್ವರಾಜ್, ಚಿತ್ತರಂಜನ್ ಬೋಳಾರ್, ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸೊಸೈಟಿಯ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.