ಮಂಗಳೂರು : ಮಂಗಳೂರಿನಲ್ಲಿ ನೆಲಸಿರುವ ಕುಂದಗನ್ನಡ ವಾಟ್ಸಪ್ ಬಳಗದಿಂದ ನೆರೆ ಸಂತ್ರಸ್ತರ ಪರಿಹಾರಕ್ಕೆ ಬಂದ ವಸ್ತುಗಳನ್ನು ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸಲಾಯಿತು. ತಂಡವು ಬೆಳ್ತಂಗಡಿಗೆ ತೆರಳುವ ಮೊದಲು ,ದೇರೆಬೈಲ್ ಚರ್ಚನಲ್ಲಿ ಸಂಯೋಜಕರು ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದರಲ್ಲಿ ಮುಖ್ಯ ಅತಿಥಿಗಳಾಗಿ, ಮೋಸ್ಟ್ ಹೋಲಿ ರೆಡಿಮೇರ ಚರ್ಚ್ ನ ಪರಮಪೂಜ್ಯ ಫಾದರ್, ಆಸ್ಟಿನ್ ಪೇರಿಸ್, ರೋಟರಿ ಕ್ಲಬ್ ನ ಗವರ್ನರ್ ಆಗಿರುವ ಗೀತಾನಂದ ಪೈ, ಮತ್ತು ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರಾದ ರಮಾನಂದ ಶೆಟ್ಟಿ ,ಕಾರ್ಯದರ್ಶಿಗಳಾದ ಜಯರಾಮ ಶೆಟ್ಟಿ ,ಕನ್ನಡ ಕಟ್ಟೆಯ ಪರವಾಗಿ ರಾಮಕೃಷ್ಣ ಮರಾಠೆ, ಕುಡ್ಲದಲ್ಲಿ ಇರುವ ಕುಂದಾಪುರದವರು ಇವರ ಪರವಾಗಿ ಐರೋಡಿ ಸಂತೋಷ್ ಶೆಟ್ಟಿ ,ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯಿಂದ, ಗೌರವ ಕಾರ್ಯದರ್ಶಿ ಎಸ್ ಎ ಪ್ರಭಾಕರ್ ಶರ್ಮ, ಇವರು ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಉಪಸ್ಥಿತರಿದ್ದರು .ಈ ಸಂದರ್ಭದಲ್ಲಿ ಚರ್ಚಿನ ಫಾದರ್ ನೆರೆಯ ಸಂತ್ರಸ್ತರಿಗೆ ಪರಿಹಾರವನ್ನು ನೀಡುವ ಸೇವಾ ಕಾರ್ಯವನ್ನು ಶ್ಲಾಘಿಸಿದರು .ಹಾಗೂ ಆರ್ ಜೆ ನಯನ ಅವರ ನಯ ವಿನಯದ, ಮಾತುಗಳ ಕಾರ್ಯಕ್ರಮದ ನಿರೂಪಣೆ ಇನ್ನಷ್ಟು ಕಾರ್ಯಕ್ರಮಕ್ಕೆ ಚಂದವನ್ನು ಒದಗಿಸಿತ್ತು.ಈ ಸಂದರ್ಭದಲ್ಲಿ ಅತಿ ಹೆಚ್ಚು ಹಣ ಮತ್ತು ವಸ್ತುವನ್ನು ಸಂಗ್ರಹಿಸುವಲ್ಲಿ ನೆರವಾದವರನ್ನು ಗುರುತಿಸಿ ಗೌರವಿಸಲಾಯಿತು.
ಸಂತೋಷ್ ಶೆಟ್ಟಿ(Acebond)ಯವರು ನೆರೆಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಸಂಯೋಜಕರು ಮಾರ್ಗದರ್ಶಕರು ಆದ ದಯಾನಂದ ಶೆಟ್ಟಿ ,ಹಾಗೂ ಅವರ ತಂಡದ ವರಾದ ಶಾಂತರಾಮ್ ಶೆಟ್ಟಿ(CA),Dr ಅಣ್ಣಯ್ಯ ಕುಲಾಲ್, ಸಂತೋಷ್ ಶೆಟ್ಟಿ ಎಂಸಿಎಫ್, ಅರುಣ್ ಶೆಟ್ಟಿ ,ರಾಘವೇಂದ್ರ ನೆಲ್ಲಿಕಟ್ಟೆ, ರೋಟರಿ ಕ್ಲಬ್ ಮಂಗಳೂರಿನ ಅಧ್ಯಕ್ಷರಾದ ರಮಾನಂದ ಶೆಟ್ಟಿ ,ಕಾರ್ಯದರ್ಶಿ ಜಯರಾಮಶೆಟ್ಟಿ, ದೇರೆಬೈಲು ಚರ್ಚಿನ ಟ್ರಸ್ಟಿಗಳಾದ ಅನಿಲ್ ಪತ್ರಾವೋ, ಪ್ರಾನ್ಸಿಸ್, ಸಂತೋಷ್ ಶೆಟ್ಟಿ ಐರೋಡಿ, ವಿವೇಕ್ ಮಿತ್ಯಂಥಯ ,ನಾಗೇಂದ್ರ ಡಿಂಕಿ ಡೈನ್ ,ಸಂತೋಷ್ ಶೆಟ್ಟಿ ,ಮಾಧ್ಯಮ ಮಿತ್ರರಾದ ಆರ್ ಜೆ ನಯನ, ಆರ್ ಜೆ ಪ್ರಸನ್ನ, ಜ್ಯೋತಿ ಹೆಂಗವಳ್ಳಿ , ನವೀನ್ ಶೆಟ್ಟಿ ಮಾಬುಕಳ ,ಹಾಗೂ
ಪ್ಯಾಕಿಂಗ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಾಲಾ ಶೆಟ್ಟಿ ಮತ್ತು ಲಿಖಿತ ಶೆಟ್ಟಿ ,ಆದರ್ಶ ಶೆಟ್ಟಿ, ಪ್ರದೀಪ್ ಪೈ , ಆನಂದ ಮತ್ತು ತಂಡ ಹಾಗೂ ಸೇವಾ ಕಾರ್ಯದಲ್ಲಿ ಕೈಜೋಡಿಸಿರುವ ಎಲ್ಲಾ ಸಂಘಟನೆಯ ಸರ್ವ ಸದಸ್ಯರಿಗೂ, ಮಾಧ್ಯಮ ಮಿತ್ರದವರನ್ನು ಹಾಗೂ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ನಂತರ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರರಾದ ಗಣಪತಿ ಶಾಸ್ತ್ರಿ ಇವರನ್ನು ಕಾರ್ಯಕ್ರಮ ಸಂಯೋಜಕರ ತಂಡದಲ್ಲಿ ಒಬ್ಬರಾದ ಸಂತೋಷ್ ಶೆಟ್ಟಿ ಎಂಸಿಎಫ್ ಸಂಪರ್ಕಿಸಿ ಮೊದಲೇ ನಿಗದಿಯಾದಂತೆ ಬುಧವಾರ ಸಂಜೆ 5 ಗಂಟೆಗೆ ಪಂಚಾಯತ್ ಪಿಡಿಒ ಅವರ ಮಾರ್ಗದರ್ಶನದಲ್ಲಿ ಸಂತ್ರಸ್ತರ 50 ಕುಟುಂಬವನ್ನ ಚಾರ್ಮಾಡಿ ಪಂಚಾಯತನಲ್ಲಿ ಒಂದುಗೂಡಿಸಿ ,ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸೆಲ್ವಂ ಮೂಲಕ ನೆರೆಸಂತ್ರಸ್ತರ ಪರಿಹಾರ ವಿತರಣೆಗೆ ಚಾಲನೆ ನೀಡಲಾಯಿತು. ಹಾಗೂ ತಂಡದ ಸದಸ್ಯರು ನೇರವಾಗಿ ಫಲಾನುಭವಿಗಳಿಗೆ ಸುಮಾರು 6 ಲಕ್ಷ ರೂ ವೆಚ್ಚದಲ್ಲಿ ಅಗತ್ಯ ವಸ್ತುಗಳಾದ ಗ್ಯಾಸ್ ,ಒಲೆ ,ಕುಕ್ಕರ್ ,ಬಟ್ಟೆ, ಮಿಕ್ಸಿ ,ಲೋಟ,ತಟ್ಟೆ, ಅನ್ನ ಸಾಂಬಾರ್ ಮಾಡುವ ಪಾತ್ರೆಗಳನ್ನು ಹಸ್ತಾಂತರಿಸಿ ಅವರನ್ನು ಸಂತೈಸಿದರು.