ಬೆಂಗಳೂರು: ಬೆಂಗಳೂರು-ಮಂಗಳೂರು ರಾ.ಹೆ-75 ರಲ್ಲಿ ನೆಲಮಂಗಲ-ದೇವಿಹಳ್ಳಿ ನಡುವಿನ ವಿಭಾಗವನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ. ಈ ವಿಭಾಗವು ಮೈಸೂರು, ಸಕಲೇಶಪುರ, ಹೆಳೇಬೀಡು, ಧರ್ಮಸ್ಥಳ ಮುಂತಾದ ಪ್ರವಾಸಿ ತಾಣಗಳಿಗೆ ವೇಗದ ಸಂಪರ್ಕವನ್ನು ಸಶಕ್ತಗೊಳಿಸುತ್ತದೆ . ವಾರಾಂತ್ಯದಲ್ಲಿ ಈ ಮಾರ್ಗವು ಸುಮಾರು 30000 ವಾಹನಗಳನ್ನು ಧಾರಣೆ ಮಾಡುವ ಸಾಮಾರ್ಥ್ಯ ಹೊಂದಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇದು ಬೆಂಗಳೂರು-ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹಾಸನ-ಸಕಲೇಶಪುರ-ಧರ್ಮಸ್ಥಳವನ್ನು ಸಂಪರ್ಕಿಸುವ ಮಾರ್ಗವಾಗಿಯೂ ಕಾರ್ಯನಿರ್ವಹಿಸುತ್ತದೆ.
ಮೈಕ್ರೊ-ಸರ್ಫೇಸಿಂಗ್ ಮಿಶ್ರಣದ ಬಾಗುವ ಶಕ್ತಿಯನ್ನು ಹೆಚ್ಚಿಸಲು ಫೈಬರ್ ಬಲವರ್ಧಿತ ಮೈಕ್ರೋ ಸರ್ಫೇಸಿಂಗ್‌ನ ಬಳಕೆಯಂತಹ ಕೆಲವು ನವೀನ ತಂತ್ರಜ್ಞಾನಗಳನ್ನು ನಾವು ನಿರ್ಮಾಣದ ಸಮಯದಲ್ಲಿ ಅನ್ವಯಿಸಿದ್ದೇವೆ ಮತ್ತು ಇದರಿಂದಾಗಿ ರಸ್ತೆಗಳ ಬಿರುಕು ನಿರೋಧಕತೆ ಮತ್ತು ದೀರ್ಘಾವಧಿಯ ಬಾಳಿಕೆ ಗಮನಾರ್ಹವಾಗಿ ಸುಧಾರಿಸುತ್ತದೆ. ಪಾದಚಾರಿ ಮಾರ್ಗದ ತೊಂದರೆಗಳನ್ನು ನಿಖರವಾಗಿ ನಿರ್ಧರಿಸಲು ನಾವು ಸ್ಟೇಟ್-ಆಫ್-ದಿ-ಆರ್ಟ್ ಪೇವ್‌ಮೆಂಟ್ ಇನ್ವೆಸ್ಟಿಗೇಶನ್‌ಗಳನ್ನು ಸಹ ಬಳಸಿದ್ದೇವೆ. ಅನೇಕ ಕೈಗಾರಿಕೆಗಳು ಮತ್ತು ಬಾಹ್ಯ ರಿಂಗ್ ರಸ್ತೆಗಳನ್ನು ಹೆದ್ದಾರಿಗೆ ಸಂಪರ್ಕಿಸುವ ಉದ್ದೇಶದಿಂದ ಕಾರಿಡಾರ್ ಅನ್ನು ಆಯಕಟ್ಟಿನ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಮತ್ತು ಪ್ರಧಾನ ಮಂತ್ರಿ ಮೋದಿಯವರ ದೂರದೃಷ್ಟಿಯ ಪ್ರಗತಿ ಯ ರಾಷ್ಟೀಯ ಹೆದ್ದಾರಿ ಮತ್ತು ಗತಿ ಶಕ್ತಿ ಯೋಜನೆಗೆ ವೇಗ ತುಂಬಿ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.