ನೆಲ್ಯಾಡಿ: ನೆಲ್ಯಾಡಿಯ ನವೀನ್ ಇಂಟರ್ ಲಾಕ್ ನ ಮಾಲೀಕ, ಉದ್ಯಮಿ ವಿ.ಜೆ. ಜೋಸೆಫ್ ಅವರ ಪುತ್ರಿ ನವ್ಯಾ ಜೋಸೆಫ್ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ನೆಲ್ಯಾಡಿಯಲ್ಲಿ ನಡೆದಿದೆ.
ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ನವ್ಯ ಸದ್ಯ ಮನೆಯಲ್ಲಿದ್ದರು. ನವ್ಯಾ ನಿನ್ನೆ ರಾತ್ರಿ 10-30ಕ್ಕೆ ವೇಳೆಗೆ ತನ್ನ ರೂಮಿನಲ್ಲಿ ಮಲಗಿದ್ದಳು. ಇಂದು ಬೆಳಿಗ್ಗೆ 8 ಗಂಟೆಯಾದರೂ ಎದ್ದಿರಲಿಲ್ಲ. ಅವರ ತಾಯಿ ಕರೆದು ಪ್ರತಿಕ್ರಿಯೆ ನೀಡಿರಲಿಲ್ಲ. ಕೊನೆಗೆ ಮೊಬೈಲ್ ಗೆ ಕರೆ ಮಾಡಿದ್ದಾರೆ.
ಆಗಲೂ ಏನೂ ಪ್ರತಿಕ್ರಿಯೆ ಬಾರದೇ ಇದ್ದರಿಂದ ತಂದೆ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಆಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಯುವತಿ ಡೆತ್ ನೋಟ್ ಬರೆದಿಟ್ಟು ತನ್ನ ಬೆಡ್ ರೂಂನಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವು ಸುಟ್ಟು ಕರಕಲಾಗಿದೆ. ಇನ್ನು ಡೆತ್ ನೋಟ್ ನಲ್ಲಿ ಏನೂ ಮಾಹಿತಿ ಇದೆ ಎಂಬುವುದು ಇನ್ನು ಬಯಲಾಗಬೇಕಿದೆ. ನೆಲ್ಯಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.