ನೀಟ್ 2023: ಎಕ್ಸ್ಪರ್ಟ್’ನ ಬೈರೇಶ್‍ಗೆ 2ನೇ ರ‍್ಯಾಂಕ್

ಮಂಗಳೂರು: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಈ ಭಾರಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್. ಅಖಿಲ ಭಾರತ ಮಟ್ಟದಲ್ಲಿ 48ನೇ ರ್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಒಟ್ಟು 720 ಅಂಕಗಳಲ್ಲಿ 710 ಅಂಕ ಪಡೆದು, ರಾಜ್ಯದ ದ್ವಿತೀಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಒಟ್ಟು ಕಾಲೇಜಿನ 1365 ವಿದ್ಯಾರ್ಥಿಗಳಲ್ಲಿ 1307ರಷ್ಟು ಅಂದರೆ ಶೇ. 96ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

720ರಲ್ಲಿ 710 ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್. ಜನರಲ್ ಮೆರಿಟ್ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 48ನೇ ರ್ಯಾಂಕ್ ಪಡೆದಿದ್ದಾರೆ. 702 ಅಂಕ ಪಡೆದ ಶಾಮಿಕ್ ಅಬ್ದುಲ್ ರೆಹಮಾನ್ ಜನರಲ್ ಮೆರಿಟ್ ವಿಭಾಗದಲ್ಲಿ 180ನೇ ರ್ಯಾಂಕ್, 700 ಅಂಕ ಪಡೆದ ಅರ್ನವ್ ಕಾಮತ್ ಜನರಲ್ ಮೆರಿಟ್ ವಿಭಾಗದಲ್ಲಿ 307ನೇ ರ್ಯಾಂಕ್, 690 ಅಂಕ ಪಡೆದ ರೋಹಿತ್ ಗೆಜ್ಜೆ 868ನೇ ರ್ಯಾಂಕ್ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ಜನರಲ್ ಮೆರಿಟ್‍ನಲ್ಲಿ ಅಖಿಲ ಭಾರತ ಮಟ್ಟದ ಮೊದಲ ಒಂದು ಸಾವಿರ ರ್ಯಾಂಕ್‍ಗಳಲ್ಲಿ 4 ರ್ಯಾಂಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ದೊರೆತಿದೆ. ಮೂವರು ವಿದ್ಯಾರ್ಥಿಗಳು 700 ಹಾಗೂ ಅದಕ್ಕಿಂತ ಅಧಿಕ ಪಡೆದರೆ, 8 ವಿದ್ಯಾರ್ಥಿಗಳು 675 ಅಂಕಕ್ಕಿಂತ ಅಧಿಕ, 22 ವಿದ್ಯಾರ್ಥಿಗಳು 650 ಅಂಕಕ್ಕಿಂತ ಅಧಿಕ, 42 ವಿದ್ಯಾರ್ಥಿಗಳು 625 ಅಂಕಕ್ಕಿಂತ ಅಧಿಕ, 79 ವಿದ್ಯಾರ್ಥಿಗಳು 600 ಅಂಕಕ್ಕಿಂತ ಅಧಿಕ, 161 ವಿದ್ಯಾರ್ಥಿಗಳು 550 ಅಂಕಕ್ಕಿಂತ ಅಧಿಕ, 275 ವಿದ್ಯಾರ್ಥಿಗಳು 500 ಅಂಕಕ್ಕಿಂತ ಅಧಿಕ, 575 ವಿದ್ಯಾರ್ಥಿಗಳು 400 ಅಂಕಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ತಿಳಿಸಿದರು.

ಅಖಿಲ ಭಾರತ ಮಟ್ಟದಲ್ಲಿ ನೀಟ್ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದರೆ, ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ಶೇ. 96ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಇದು ಶಿಕ್ಷಣ ಸಂಸ್ಥೆಯ ಗುಣಮಟ್ಟಕ್ಕೆ ಕೈಗನ್ನಡಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ಸೋಮಶೇಖರ್ ಆರ್ ನಡುವಿಯುನಮನಿ ಜನರಲ್ ಮೆರಿಟ್‍ನಲ್ಲಿ 1156ನೇ ರ್ಯಾಂಕ್ (ಅಂಕ 685), ಶ್ರೀವತ್ಸ ಲಕ್ಷ್ಮಣ ಹೆಗಡೆ ಜನರಲ್ ಮೆರಿಟ್‍ನಲ್ಲಿ 1439ನೇ ರ್ಯಾಂಕ್ (ಅಂಕ 681), ಹೇಮಚಂದ್ರ ಸಿ. ಜನರಲ್ ಮೆರಿಟ್‍ನಲ್ಲಿ 1720ನೇ ರ್ಯಾಂಕ್ (ಅಂಕ 680), ವೀಕ್ಷಿತ್ ವಿ. ಎಚ್. ಜನರಲ್ ಮೆರಿಟ್‍ನಲ್ಲಿ 1789ನೇ ರ್ಯಾಂಕ್ (ಅಂಕ 678), ಧನುಷ್ ವಿ. (ಅಂಕ 670), ಸಮರ್ಥ್ ಸಿ. ಶೆಟ್ಟಿ (ಅಂಕ 667), ರಾಹುಲ್ ವೈ. (ಅಂಕ 666), ಮಹದೇಶ್ವರ ಸಿ. (ಅಂಕ 665), ವರುಣ್ ಕೆ. ಆರ್. (ಅಂಕ 660), ಅಪೂರ್ವ ಅಸೂತಿ (ಅಂಕ 658), ಆದರ್ಶ್ ಎಸ್. ನಾಯಕ್ (ಅಂಕ 658), ಶಮ ಜಗದೀಶ್ ಎಚ್. (ಅಂಕ 655), ಮನಸ್ವಿ ಹೆಗಡೆ (ಅಂಕ 653), ಶ್ರೇಯಾ ವೈ. ಜೆ. (ಅಂಕ 651), ರೋಹಿತ್ ಎಸ್. ಮೂರ್ತಿ (ಅಂಕ 651 – ಕ್ಫ್ಯಾಟಗರಿಯಲ್ಲಿ 158ನೇ ರ್ಯಾಂಕ್), ಡಿ. ನವಮಿ ಪೈ (ಅಂಕ 651), ಯೋಜಿತ್ ಹಳೆಮನೆ (ಅಂಕ 650), ಹಾರ್ದಿಕ್ ಸಿ. ಎ. (ಅಂಕ 650), ಸಫೀನಾ ಯಮನೂರಸಾಬ್ ಬೇಲೇರಿ (ಅಂಕ 649), ನಿಧಿಶ್ ಎಚ್. ಎ. (ಅಂಕ 645), ಅನಿಕೇತ್ ಎಸ್.ಬಿ. (ಅಂಕ 645), ತ್ರಿಶಾ ಎಸ್. (ಅಂಕ 645), ಅದಿತಿ ಬಿ ಎನ್. (ಅಂಕ 641), ಕಮಲ್ ಬಿ. (ಅಂಕ 638), ಅಮೋಘ್ ಬಿ. ಕಟ್ಟಿಮನಿ (ಅಂಕ 637), ಸುಭಾಷ್ ಗೌಡ ಕೆ.ಎಸ್. (ಅಂಕ 636), ನಿನೋ ಫ್ರಾನ್ಸಿಸ್ಕೊ ಡಯಾಸ್ (ಅಂಕ 636), ಸ್ವಸ್ತಿಕ್ ಜೆ. ಐಲ್ (ಅಂಕ 636), ವೇದಾಂತ್ ಹೊಟ್ಟಿಗಿಮತ್ (ಅಂಕ 635), ಮಿಥಿಲ್ ಕಮ್ಮ ಚೌಧರಿ (ಅಂಕ 635), ಶಾಜಾ ಫಾತಿಮಾ (ಅಂಕ 633), ಸಿದ್ಧಿವಿನಾಯಕ್ ಅಭಯ್ ಎಂಡೋಲಿ (ಅಂಕ 632), ಯಶಸ್ ಗೌಡ ಎನ್. (ಅಂಕ 632), ಅಮೃತಾ ಪಿ. ಭಕ್ತ (ಅಂಕ 630), ನಿರಂಜನ್ ಜಿ.ಆರ್. (ಅಂಕ 629), ಎ.ಎಸ್. ಚಿರಸ್ವಿ ಗೌಡ (ಅಂಕ 627), ಬಿ.ವಿ. ವರ್ಷಿತ ಗೌಡ (ಅಂಕ 626), ಕೈಲಾಶ್ ಎಸ್. ಹೆಗ್ಡೆ (ಅಂಕ 626), ಸ್ಕಂದ ಅಶ್ವಿಂತ್ (ಅಂಕ 622), ಚಂದನಾ ಆರ್. ದೇಶಪಾಂಡೆ (ಅಂಕ 621), ಆತ್ಮಿಕ್ ಎಚ್.ಸೂಡಾ (ಅಂಕ 621), ಸಿದ್ದಾಂತ್ ಎಸ್. ಕಾಮತ್ (ಅಂಕ 620), ಜ್ಞಾನೇಶ್ ಟಿ. ಆರಾಧ್ಯ (ಅಂಕ 620), ಅಬಿಶಾಂತ್ ಎಂ. ಹಿರೇಮಠ (ಅಂಕ 620), ಅದಿತಿ ಗಣಪತಿ ಹೆಗ್ಡೆ (ಅಂಕ 620), ರೇವತಿ ಚಂದ್ರಕಾಂತ ಜವಳಿ (ಅಂಕ 619), ಸಾಯಿರಾಜ್ ಸಂಗಮನಾಥ್ ಮದರಿ (ಅಂಕ 619), ರೋಹನ್ ಜಿ. ಗವರೋಜಿ (ಅಂಕ 617), ವೇದ ಹೆಗಡಿ (ಅಂಕ 616), ಕೃತಿಕಾ ಎಸ್.ಡಿ. (ಅಂಕ 616), ಅನ್ವಿತಾ ಡಿ. (ಅಂಕ 615), ಶೆಟ್ಟಿ ಶ್ರಾವ್ಯ ಸುದರ್ಶನ್ (ಅಂಕ 614), ಸ್ಪರ್ಶ ರಾವ್ (ಅಂಕ 614), ವಿವೇಕ್ ವಿ. ಕರಿಸೆಟ್ಟಿ (ಅಂಕ 612), ಸಾಯಿ ಪ್ರದೀಪ ಕುಮಾರ್ ಪಾಟೀಲ್ (ಅಂಕ 612), ಸೃಜನ್ ಎಸ್. ಅರಳೆ (ಅಂಕ 610), ಚಿರಂತ್ ಸಿ.ಪಿ. (ಅಂಕ 610), ನೇತ್ರಾ ಕಳ್ಳಿಬಡ್ಡಿ (ಅಂಕ 609), ಹರ್ಷ ಟಿ. (ಅಂಕ 609), ಸಿ. ವಿ. ವಿನಯ್ (ಅಂಕ 608), ನಾಗರಾಜ್ ಎಸ್. ಗುಗ್ಗರಿ (ಅಂಕ 607), ಸೃಜನ್ ಎಸ್. (ಅಂಕ 606), ಸಂಜನಾ ವಿ. (ಅಂಕ 605), ಹರ್ಷಿತ್ ಎಸ್. (ಅಂಕ 605), ಅಭಿಜಿತ್ ಅಯ್ಯರ್ (ಅಂಕ 605), ಪ್ರತೀಕ್ ಅಬ್ಬಾಯಿ (ಅಂಕ 603), ಅನುಶ್ರೀ ಮಂಕಾರೆ (ಅಂಕ 603), ಕುಪ್ಪಸ್ತ ಶಶಾಂಕ್ (ಅಂಕ 603), ರಚನಾ ಎಚ್. (ಅಂಕ 603), ಯು. ಕೆ. ಪವನ್ ಕುಮಾರ್ (ಅಂಕ 603), ಪ್ರತೀಕ್ ರಾವ್ (ಅಂಕ 603), ಆದ್ಯ ಎಸ್. ಗೌಡ (ಅಂಕ 601), ತೇಜಸ್ ಎಸ್.ಎಚ್. (ಅಂಕ 600), ಹರೀಶ್ ಸಲಬನ್ನವರ್ (ಅಂಕ 600), ಪ್ರಖ್ಯಾತ್ ಶೆಟ್ಟಿ (ಅಂಕ 600) ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.

ಕ್ಯಾಟಗರಿ ವಿಭಾಗದಲ್ಲಿ ಹಿಮಾಂಶು ಎಂ. ಕಾಕೋಲಾ 759ನೇ ರ್ಯಾಂಕ್, ಆದಿತ್ಯ ಡಿ. 808ನೇ ರ್ಯಾಂಕ್, ಪ್ರೇಮ್ ಉಮೇಶ್ ಭೋವಿ 844ನೇ ರ್ಯಾಂಕ್, ವೈಷ್ಣವಿ ಬಿ.ಟಿ. 905ನೇ ರ್ಯಾಂಕ್, ಐ.ಎನ್. ಕೀರ್ತನ್ 981ನೇ ರ್ಯಾಂಕ್ ಪಡೆದಿದ್ದಾರೆ.