ಪೊಲೀಸ್ ಲೈನ್ ಶ್ರೀಮೂಕಾಂಬಿಕಾ ಭಜನಾ ಮಂದಿರದಲ್ಲಿ ನವರಾತ್ರಿ ಪೂಜೆ

ಉಡುಪಿ: ಶ್ರೀ ಮೂಕಾಂಬಿಕಾ ಭಜನಾ ಮಂದಿರ ಪೊಲೀಸ್ ಲೈನ್ ನಲ್ಲಿ ಸೋಮವಾರದಂದು ನವರಾತ್ರಿ ಅಂಗವಾಗಿ ಶ್ರೀ ದೇವಿಗೆ ವಿಶೇಷ ಹೂವಿನ ಅಲಂಕಾರ, ಚಂಡಿಕಾ ಹೋಮದ ಧಾರ್ಮಿಕ ಪೂಜಾ ವಿಧಾನಗಳನ್ನು ಹರೀಶ್ ಕೊಡಂಚ ನಡೆಸಿಕೊಟ್ಟರು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಿತು. ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ನೂರಾರು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪೂರ್ಣ ಆಹುತಿ ಮಹಾ ಪೂಜೆಯ ಬಳಿಕ ಸಾರ್ವಜನಿಕರ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.