ನವ ದೆಹಲಿ: ಗುರ್ನಾಮ್ ಸಿಂಗ್ ಎಂಬ ವ್ಯಕ್ತಿ ಸಾವನ್ನಪ್ಪಿದ 1988 ರ ರಸ್ತೆ ರಂಪಾಟ ಅಪಘಾತ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧು ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಒಂದು ವರ್ಷಕ್ಕೆ ಹೆಚ್ಚಿಸಿದೆ. ಈ ಹಿಂದೆ ಪಂಜಾಬ್ ಹೈಕೋರ್ಟ್ 1000 ರೂಪಾಯಿ ದಂಡ ವಿಧಿಸಿ ಸಿಧು ಅವರನ್ನು ಬಿಡುಗಡೆಗೊಳಿಸಲಾಗಿತ್ತು.
ಏನಿದು ಕೇಸ್?
- ಡಿಸೆಂಬರ್ 27, 1988 ರಂದು, ಸಿಧು ರಸ್ತೆಯಲ್ಲಿ ಗುರ್ನಾಮ್ ಸಿಂಗ್ ಎಂಬ ವ್ಯಕ್ತಿಯೊಂದಿಗೆ ಜಗಳವಾಡಿದ್ದರು.
- ನಂತರ ಆ ವ್ಯಕ್ತಿಯನ್ನು ಕಾರಿನಿಂದ ಹೊರಗೆಳೆದು ಥಳಿಸಿದ್ದರು.
- ತಲೆಗೆ ಪೆಟ್ಟು ಬಿದ್ದು, ಆ ವ್ಯಕ್ತಿ ಸಾವನ್ನಪ್ಪಿದ್ದನು.
ಸುಮಾರು ಮೂರು ದಶಕಗಳ ಹಿಂದಿನ ಬೀದಿ ಹಿಂಸಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜೈಲು ಪಾಲಾಗಿದ್ದಾರೆ. ಸುಪ್ರೀಂ ಕೋರ್ಟ್ ಶಿಕ್ಷೆಯನ್ನು ಪ್ರಕಟಿಸಿದೆ. ರಸ್ತೆಯಲ್ಲಿ ಕಾರು ನಿಲ್ಲಿಸಿ ವ್ಯಕ್ತಿಯೊಬ್ಬನಿಗೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ವ್ಯಕ್ತಿ ನಂತರ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾನೆ. ಒಂದು ಹಂತದಲ್ಲಿ ಸಿಧು ವಿರುದ್ಧ ಅನೈಚ್ಛಿಕ ಕೊಲೆ ಪ್ರಕರಣವೂ ದಾಖಲಾಗಿತ್ತು, ಆದರೆ ನಂತರ ಅದನ್ನು ವಜಾಗೊಳಿಸಲಾಗಿತ್ತು. ಇಷ್ಟು ವರ್ಷಗಳ ನಂತರ ಇದೇ ಪ್ರಕರಣದಲ್ಲಿ ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಶಿಕ್ಷೆ ವಿಧಿಸಿದೆ ಮತ್ತು ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ.












