ನವದೆಹಲಿ: ಶನಿವಾರ ಕಝಾಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ಕೊಸಾನೋವ್ ಸ್ಮಾರಕ 2022 ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಮಹಿಳಾ ಡಿಸ್ಕಸ್ ಎಸೆತಗಾರ್ತಿ ನವಜೀತ್ ಧಿಲ್ಲೋನ್ ಚಿನ್ನದ ಪದಕ ಗೆದ್ದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲು ನೋಡುತ್ತಿರುವ ನವಜೀತ್ ಧಿಲ್ಲೋನ್, ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ 56.24 ಮೀ ದೂರ ಎಸೆದು ಚಿನ್ನ ಗೆದ್ದಿದ್ದಾರೆ.
ಸಿಡಬ್ಲ್ಯೂಜಿಗಾಗಿ 4×100ಮೀ ರಿಲೇ ತಂಡದಲ್ಲಿ ಆಯ್ಕೆಯಾಗಿರುವ ದ್ಯುತಿ ಚಂದ್ 100ಮೀ ಫೈನಲ್‌ನಲ್ಲಿ 11.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 11.40 ಸೆಕೆಂಡ್‌ಗಳಲ್ಲಿ ಚಿನ್ನ ಗೆದ್ದ ಕಜಕಿಸ್ತಾನ್‌ನ ಓಲ್ಗಾ ಸಫ್ರೊನೊವಾ ನಂತರದ ಎರಡನೇ ಸ್ಥಾನ ಪಡೆದಿದ್ದಾರೆ. ಭಾರತದ ಎಂವಿ ಜಿಲ್ನಾ 11.61 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದಿದ್ದಾರೆ.
ಕೊಸಾನೋವ್ ಸ್ಮಾರಕ 2022 ಅಥ್ಲೆಟಿಕ್ಸ್ ಕೂಟದಲ್ಲಿ ಭಾರತ ಇದುವರೆಗೆ ಏಳು ಚಿನ್ನ ಸೇರಿದಂತೆ ಒಟ್ಟು 14 ಪದಕಗಳನ್ನು ಗೆದ್ದಿದೆ. ಟೋಕಿಯೊ ಒಲಿಂಪಿಕ್ ಆಟಗಾರ್ತಿ ಧನಲಕ್ಷ್ಮಿ ಸೇಕರ ಇಂದು ಕೂಟದಲ್ಲಿ ಸ್ಪರ್ಧಿಸುತ್ತಿದ್ದಾರೆ.












