ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆ. 26 ರಿಂದ ಆ. 5 ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶರನ್ನವರಾತ್ರಿ ಮಹೋತ್ಸವ ಜರಗಲಿದೆ.
ಸೆ. 26ರ ಮಧ್ಯಾಹ್ನ 12ಕ್ಕೆ ಶ್ರೀ ದೇವಿಯ ಉತ್ಸವ ಮೂರ್ತಿಗೆ ಚಿನ್ನದ ಮುಖವಾಡ ಮತ್ತು ನೂತನ ರಾಜ್ಯದ ಅಟ್ಟೆಕುಪ್ಪಸ ಸಮರ್ಪಣೆ ಜರುಗಲಿದೆ. ಪ್ರತೀ ನಿತ್ಯ ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ತ್ರಿಕಾಲ ಬಲಿ ಉತ್ಸವ ಮತ್ತು ಮಹೋತ್ಸವ ಜರಗಲಿದೆ. ಅ. 2ರಂದು ರಾತ್ರಿ ಶಾರದಾ ಪ್ರತಿಷ್ಠೆ, ವಿಶೇಷ ಪೂಜೆ, ಅ. 4ರ ಮಹಾನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ, ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ ಪುರ ಮೆರವಣಿಗೆ, ಅ. 5ರ ವಿಜಯದಶಮಿಯಂದು ಉದಯ ಪೂರ್ವ 6:5ಕ್ಕೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ, ಕಣಜ ತುಂಬಿಸುವುದು, ಶಮೀ ಪೂಜೆ ಮತ್ತು ರಾತ್ರಿ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ. ಪ್ರತೀ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಭಜನೆ ಇರಲಿದೆ. ನವರಾತ್ರಿ ಕಾಲದಲ್ಲಿ ಒಟ್ಟು 100 ಹೋಮಗಳು ಜರುಗಲಿದೆ. ಈ ಭಾರಿ ಪ್ರಥಮ ಬಾರಿಗೆ ಹೊಸ ಪ್ರಯೋಗವಾಗಿ ಕ್ಷೇತ್ರಕ್ಕೆ ಬರುವ ಗಣ್ಯರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ ತಿಳಿಸಿದ್ದಾರೆ.