ಕೋಟ: ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಸೆ.26 ಸೋಮವಾರದಿಂದ ಅ. 05 ಬುಧವಾರದವರೆಗೆ ಶರನ್ನವರಾತ್ರಿಯ ಅಂಗವಾಗಿ ಪ್ರತಿದಿನ ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮ, ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ಸಕಲ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಈ ದೇವತಾ ಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ, ಶ್ರೀದೇವಿಯ ಪವಿತ್ರ ಕುಂಕುಮ ಪ್ರಸಾದವನ್ನು ಸ್ವೀಕರಿಸಿ ಸಪರಿವಾರ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿಯ ಸಂಪೂರ್ಣ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಅಪೇಕ್ಷಿಸುವ,
ಆನಂದ ಸಿ.ಕುಂದರ್ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ಪ್ರಶಾಂತ್ ಕುಮಾರ್ ಶೆಟ್ಟಿ ಕಾರ್ಯನಿರ್ವಾಹಣಾಧಿಕಾರಿ
ಹಾಗೂ ಸದಸ್ಯರಾದ ಪ್ರಧಾನ ಅರ್ಚಕರು, ಶ್ರೀಮತಿ ಜ್ಯೋತಿ ಬಿ. ಶೆಟ್ಟಿ, ಶ್ರೀಮತಿ ಸುಶೀಲ ಸೋಮಶೇಖರ್, ಶ್ರೀ ಸುಂದರ್ ಕೆ., ರಾಮ ದೇವ ಐತಾಳ್, ಸತೀಶ್ ಹೆಗ್ಡೆ ಜಿ., ಸುಬ್ರಾಯ ಆಚಾರ್ಯ, ಚಂದ್ರ ಪೂಜಾರಿ ಮತ್ತು ಅರ್ಚಕ ವೃಂದ, ಸಿಬ್ಬಂದಿ ವರ್ಗ ಮತ್ತು ಊರವರು.
• 05-10-2022 ಬುಧವಾರ ವಿಜಯದಶಮಿ ದುರ್ಗಾಹೋಮ ಮತ್ತು ಮಹಾ ಅನ್ನಸಂತರ್ಪಣೆ
• ನವರಾತ್ರಿ ಪ್ರಯುಕ್ತ ಪ್ರತಿದಿನ ಮಧ್ಯಾಹ್ನ 12:30ಕ್ಕೆ ಮಹಾಪೂಜೆ ನಂತರ ಅನ್ನ ಸಂತರ್ಪಣೆ. ಸಂಜೆ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.
• ದುರ್ಗಾಹೋಮ ಹಾಗೂ ಅನ್ನಸಂತರ್ಪಣೆಗೆ ದೇಣಿಗೆ ನೀಡುವವರು ದೇವಳದ ಕಚೇರಿಯಲ್ಲಿ ತಮ್ಮ ದಿನಾಂಕವನ್ನು ನಿಗದಿಪಡಿಸಿಕೊಳ್ಳಿ.