ಉಡುಪಿ: ನೇಚರ್ ಎವೇರ್‌ನೆಸ್ ಫೌಂಡೇಶನ್ ಟ್ರಸ್ಟ್, ಲಕ್ಷ್ಮೀನಗರ ಇದರ ಉದ್ಘಾಟನಾ ಸಮಾರಂಭವು ಫೆ.1ರಂದು ಉಡುಪಿ ಪುತ್ತೂರಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಕೃಷ್ಣ ಆಚಾರ್ಯ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಜಾಗತಿಕ ಜಾಗೃತಿಗಾಗಿ ಎಂಬ ಕಿರು ಹೊತ್ತಿಗೆಯ ಬಿಡುಗಡೆಯಾಗಲಿದೆ. ಅಂದು ಸಂಜೆ 4ಗಂಟೆಗೆ ನಿಟ್ಟೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್ ಕರ್ನೇಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
















