ನವೆಂಬರ್ 19 ರಂದು ಬ್ಯಾಂಕ್ ಮುಷ್ಕರ: ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಸಾಧ್ಯತೆ

ನವದೆಹಲಿ: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮುಷ್ಕರದ ಕರೆಯಿಂದಾಗಿ ನವೆಂಬರ್ 19, ಶನಿವಾರದಂದು ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಷ್ಕರದ ದಿನಗಳಲ್ಲಿ ಬ್ಯಾಂಕಿನ ಶಾಖೆಗಳು ಮತ್ತು ಕಚೇರಿಗಳ ಸುಗಮ ಕಾರ್ಯನಿರ್ವಹಣೆಗೆ ಬ್ಯಾಂಕ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ಮುಷ್ಕರವು ಕಾರ್ಯರೂಪಕ್ಕೆ ಬಂದರೆ, ಶಾಖೆಗಳು ಮತ್ತು ಕಚೇರಿಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಎಐಬಿಇಎ ತಿಳಿಸಿದೆ. ರಾಷ್ಟ್ರವ್ಯಾಪಿ ಮುಷ್ಕರಕ್ಕೂ ಮುನ್ನ ಎಐಬಿಇಎ ಸದಸ್ಯರು ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಲಿದೆ ಎಂದು ವರದಿಯಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊರಗುತ್ತಿಗೆ ನೀಡುವಿಕೆ, ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿ ಸಿಬ್ಬಂದಿಗಳ ವರ್ಗಾವಣೆ, ಟ್ರೇಡ್ ಯೂನಿಯನ್ ಹಕ್ಕುಗಳ ನಿರಾಕರಣೆ ಮುಂತಾದವುಗಳನ್ನು ವಿರೋಧಿಸಿ ಬ್ಯಾಂಕ್ ನೌಕರರ ಸಂಘದ ಸದಸ್ಯರು ಮುಷ್ಕರ ಕರೆದಿದ್ದಾರೆ.