ಮಲ್ಪೆ: ರಾಷ್ಟ್ರಮಟ್ಟದ ಬಾಕ್ಸಿಂಗ್ ಪಟು ಆತ್ಮಹತ್ಯೆಗೆ ಶರಣು

ಮಲ್ಪೆ: ರಾಷ್ಟ್ರಮಟ್ಟದ ಬಾಕ್ಸಿಂಗ್ ಪಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಶಾಂತಿನಗರದಲ್ಲಿ ನಡೆದಿದೆ. ಶಾಂತಿನಗರ ನಿವಾಸಿ 24 ವರ್ಷ ಪ್ರಾಯದ ವಿರಾಜ್ ಮೆಂಡನ್ ಆತ್ಮಹತ್ಯೆ ಮಾಡಿಕೊಂಡ ಯುವಕ.

ವಿರಾಜ್ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದ. ಒಳ್ಳೆಯ ಕ್ರೀಡಾಪಟು ಎಂಬ ಹೆಸರನ್ನು ಕೂಡಾ ಪಡೆದಿದ್ದ. ಇಂದು ಶಾಂತಿನಗರದಲ್ಲಿರುವ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.