ಕಾರ್ಕಳ: ರಾಷ್ಟ್ರಮಟ್ಟದ ಐಐಟಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್ ನಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ಐದು ಮಂದಿ ವಿದ್ಯಾರ್ಥಿಗಳು 10 ಸಾವಿರದೊಳಗಿನ ರ‍್ಯಾಂಕ್ ಗಳಿಸಿದ್ದಾರೆ.
ಈ ಮೂಲಕ ದೇಶದ ಅಗ್ರಶ್ರೇಯಾಂಕದ ಪ್ರತಿಷ್ಠಿತ 5 ಐಐಟಿಗಳಲ್ಲಿ ಪ್ರವೇಶಕ್ಕೆಅರ್ಹತೆ ಗಳಿಸಿಕೊಂಡಿದ್ದಾರೆ. ಆಲ್‍ಇಂಡಿಯಾ ರ‍್ಯಾಂಕಿಂಗ್ ನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಅಭಯ್ ಕಾಮತ್ 1099 (ಕೆಸಿಇಟಿಯಲ್ಲಿ 17ನೇ ರ‍್ಯಾಂಕ್), ಮನ್ವಿತ್ ಪ್ರಭು 5179, ಶ್ರೇಯಸ್ ಪೈ 5583, ಕುಂಬಾರ್ ಅನೀಶ್ 6822, ಶ್ರೀಹರಿ ಪಡಿಗಾರ್ 9903 (ಜೆಇಇಆರ್ಕಿಟೆಕ್ಚರ್‍ನಲ್ಲಿರಾಷ್ಟ್ರ ಮಟ್ಟದಲ್ಲಿ15ನೇ ರ‍್ಯಾಂಕ್) ಬಂದಿರುತ್ತದೆ.
ಕಳೆದ ಜೆಇಇಮೈನ್ 2021ನಲ್ಲಿಯೂ ಈ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಅಪ್ರತಿಮ ಸಾಧನೆಗೈದಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.