ಹಿರಿಯಡ್ಕ: ಎನ್.ಎಸ್.ಎಸ್.  ಸ್ವಯಂಸೇವಕರಿಂದ ಭತ್ತದ ನಾಟಿ ಕಾರ್ಯಕ್ರಮ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಕೃಷಿಕನ ಶ್ರಮವನ್ನು ಅರಿಯುವ ಮತ್ತು ಯುವಕರಲ್ಲಿ ಸೇವಾ ಮನೋಭಾವನೆಯನ್ನು ಬೆಳಸುವ ಉದ್ದೇಶದಿಂದ ಹಿರಿಯಡಕದ ಪಡ್ಡಂ ಪಡುಭಾಗ ಇಲ್ಲಿಯ ದಾಮೋದರ್ ಅವರ ಸಹಕಾರದಲ್ಲಿ ರತ್ನಾಕರ ಶೆಟ್ಟಿಯವರ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

ಪ್ರಾಂಶುಪಾಲೆ ಡಾ.ನಿಕೇತನರವರ ಮಾರ್ಗದರ್ಶನದೊಂದಿಗೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರವೀಣ ಶೆಟ್ಟಿ ಮತ್ತು ಸುಭಾಷ್ ಎಚ್.ಕೆ. ಕಾರ್ಯಕ್ರಮವನ್ನು ಆಯೋಜಿಸಿ, ಇಂದಿನ ಯುವಕರು ಕೃಷಿ, ಅದರಲ್ಲೂ ಭತ್ತದ ಕೃಷಿಯಿಂದ ವಿಮುಖರಾಗುತ್ತಿರುವ ಬಗ್ಗೆ, ರೈತರ ವಿವಿಧ ರೀತಿಯ ಕೌಶಲಗಳನ್ನು ಉಳಿಸಿ ಬೆಳಸಿಕೊಂಡು ಹೋಗುವ ಜವಾಬ್ದಾರಿ ಗ್ರಾಮೀಣ ಪ್ರದೇಶದ ಯುವಕರ ಮೇಲಿದೆ ಎಂದು ನುಡಿದರು.

ರಾ.ಸೇ.ಯೋಜನೆಯ ಸ್ವಯಂಸೇವಕರು ನೇಜಿ ತೆಗೆದು ನಾಟಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾದ್ಯಾಪಕರುಗಳಾದ ಡಾ. ರಾಘವೇಂದ್ರ ಪಿ. ಕೆ., ಆನಂದ ಎಂ.ಬಿ., ಸಿಬ್ಬಂದಿಗಳಾದ ವಿಜಯಲಕ್ಷ್ಮೀ ಹಾಗೂ ರಾ.ಸೇ.ಯೋಜನೆಯ ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು.