ರಾಜ್ಯ ಮಟ್ಟದ ಮ್ಯಾರಥಾನ್: ನಂದಿನಿಗೆ ಪ್ರಥಮ ಸ್ಥಾನ

ಪ್ರಸಕ್ತ ಸಾಲಿನ ಯುವಜನೋತ್ಸವ ಅಂಗವಾಗಿ ರೆಡ್ ರಿಬ್ಬನ್ ರನ್ ಯೂತ್ ಫಾರ್ ಹೆಚ್.ಐ.ವಿ ಏಡ್ಸ್ ಕುರಿತು ಶುಕ್ರವಾರ ನಡೆದ ರಾಜ್ಯ ಮಟ್ಟದ ಮ್ಯಾರಥಾನ್ ಕಾರ್ಯಕ್ರಮದ ಮಹಿಳೆಯರ ವಿಭಾಗದಲ್ಲಿ ಜಿಲ್ಲೆಯ ನಿಟ್ಟೆ ಡಾ. ಎನ್.ಎಸ್.ಎ.ಎಮ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ನಂದಿನಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ನಗದು ಬಹುಮಾನವಾಗಿ ಇವರಿಗೆ 25,000 ರೂ, ಗಳನ್ನು ನೀಡಲಾಗಿದ್ದು, ಅಕ್ಟೋಬರ್ 6 ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ರೆಡ್ ರಿಬ್ಬನ್ ರನ್ ಯೂತ್ ಫಾರ್ ಹೆಚ್.ಐ.ವಿ ಏಡ್ಸ್ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದು, ಅಲ್ಲಿಯೂ ಸಹ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲೆಗೆ ಕೀರ್ತಿ ತರಲೆಂದು ಜಿಲ್ಲಾ ಆರೋಗ್ಯ ಮತ್ತು ಕು.ಕ.ಇಲಾಖೆ ಶುಭ ಹಾರೈಸಿರುತ್ತಾರೆ.