ಪಡುಬಿದ್ರೆ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಕಾರ್ಯಕ್ರಮ ಸೆ. 29ರಿಂದ ಅ. 10ರ ವರೆಗೆ ಸಂಭ್ರಮದಿಂದ ನಡೆಯಲಿದೆ.
ಶರನ್ನವರಾತ್ರಿ ಪ್ರಯುಕ್ತ ಪ್ರತಿದಿನ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ನವರಾತ್ರಿ ಪೂಜೆ ನಡೆಯಲಿದೆ.
ಸೆ.29 ಅದ್ಯಗಣಯಾಗ, ಚಂಡಿಕಾಯಾಗ ಸೆ.30 ಲಕ್ಷ್ಮಿ ಹೃದಯ ಹೋಮ, ಅ.1ರಿಂದ 3: ಚಂಡಿಕಾಯಾಗ, ಅ. 4 ಮತ್ತು 5ರಂದು ಶ್ರೀ ಸೂಕ್ತ ಹೋಮ, ಅ.6 ದುರ್ಗಾಷ್ಟಮಿ, ಚಂಡಿಕಾಯಾಗ, ಅ. 7 ಮಹಾನವಮಿ, ಸಾರ್ವಜನಿಕ ಚಂಡಿಕಾಯಾಗ, ಬೆಳಿಗ್ಗೆ 10ಗಂಟಗೆ ಪೂರ್ಣಹುತಿ, ಅನ್ನಸಂತರ್ಪಣೆ ಅ.8ರಂದು ವಿಜಯದಶಮಿ ಆಚರಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.