ಆಯುರಾರೋಗ್ಯಕ್ಕಾಗಿ ನಂದಿ ಆರ್ಗಾನಿಕ್ ಫಾರ್ಮ್ ಹೌಸ್ ನ ಸಾವಯವ ಮೊರಿಂಗಾ(ನುಗ್ಗೆ) ಉತ್ಪನ್ನಗಳು

ಮಾನವ ಮಾನಸಿಕವಾಗಿ ನೆಮ್ಮದಿಯಿಂದ ಇರುವುದು ಮುಖ್ಯ ಅಷ್ಟೇ ನೆಮ್ಮದಿಯು ಆತನ ದೇಹದಿಂದಲೂ ಅವನಿಗೆ ದೊರೆಯುವುದು ಮುಖ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂಬ ಮಾತಿನಂತೆ ಮನುಷ್ಯನಿಗೆ ತನ್ನ ದೇಹ ಸಹಕರಿಸಿದಾಗ ಮಾತ್ರ ಆತನ ಮನಸ್ಸು ದೃಢವಾಗಿರಲು ಸಾಧ್ಯ. ಆ ನಿಟ್ಟಿನಲ್ಲಿ ಕೊಪ್ಪಳದ ತಾವರೆಕೆರೆಯಲ್ಲಿ ಡಾ. ಬಸಯ್ಯ ಹಿರೇಮಠ ಎಂಬುವವರು “ನಂದಿ ಆರ್ಗಾನಿಕ್ ಫಾರ್ಮ್ ಹೌಸ್” ಎಂಬ ಒಂದು ಸಂಸ್ಥೆಯನ್ನು ನಿರ್ಮಿಸಿ ಸಂಪೂರ್ಣವಾಗಿ ಸಾವಯವತೆಯನ್ನು ಉಳಿಸಿಕೊಂಡು ಮತ್ತು ನಿರ್ಮಿಸಿಕೊಂಡು ಬಂದಿದ್ದಾರೆ.

ಈ ಕಂಪನಿಯು ಕರ್ನಾಟಕದ ಏಕೈಕ ಮೋರಿಂಗಾ ಬೆಳೆಯ ಸಾವಯವ ಪ್ರಮಾಣೀಕರಿಸಲ್ಪಟ್ಟ ಕಂಪನಿಯಾಗಿ ಬೆಳೆದು ಬಂದಿದೆ. ಇದು ರಾಸಾಯನಿಕ ಬಳಕೆ ಮುಕ್ತ ಮತ್ತು ಹಾನಿಕಾರಕ ರಾಸಾಯನಿಕ ಮುಕ್ತ ಆರೋಗ್ಯಕರ ಸಾವಯವ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮುಖ್ಯ ಉದ್ದೇಶವನ್ನು ಹೊಂದಿದೆ.

ನುಗ್ಗೆ ಬೀಜವನ್ನು ಮತ್ತು ನುಗ್ಗೆ ಎಲೆಯನ್ನು ಬಳಸಿಕೊಂಡು, ಜನರ ಬಳಕೆಗೆ ಅನುಗುಣವಾಗಿ ನುಗ್ಗೆ ಸೊಪ್ಪನ್ನು ಬಳಸಿಕೊಂಡು ಮಾತ್ರೆ, ಔಷಧಿ ಮತ್ತು ಪುಡಿಯನ್ನು ಹಾಗೂ ನುಗ್ಗೆ ಬೀಜವನ್ನು ಬಳಸಿಕೊಂಡು ಎಣ್ಣೆಯನ್ನು ತಯಾರಿಸುತ್ತಾರೆ. ನುಗ್ಗಿ ಸೊಪ್ಪಿನಿಂದ ತಯಾರಾದ ಪುಡಿ, ಮಾತ್ರೆ ಮತ್ತು ಔಷಧಗಳು ಮಧುಮೇಹ, ಅಧಿಕ ರಕ್ತದೊತ್ತಡ, ತೂಕದ ಇಳಿಕೆ, ಮೊಡವೆಗಳು, ಉತ್ತಮ ಪೋಷಕಾಂಶಗಳು, ದೈಹಿಕವಾಗಿ ಸದೃಢತೆ, ನಿದ್ರಾಹೀನತೆ, ಉರಿಯುತ, ಜೀರ್ಣಕ್ರಿಯೆ, ನರಗಳ ದೌರ್ಬಲ್ಯ ಕಡಿಮೆ, ಆರೋಗ್ಯಕರ ಮೆದುಳು ಹೀಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಅಮೈನೋ ಆಸಿಡ್, ಐರನ್, ಕ್ಯಾಲ್ಸಿಯಂ, ಕ್ಯಾಷಿಯಂ, ಮ್ಯಾಗ್ನೇಷಿಯಂ, ಜಿಂಕ್ ಮತ್ತು ವಿಟಮಿನ್ ಹೀಗೆ ಹಲವಾರು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ.

ಅಲ್ಲದೆ ಈ ಕಂಪನಿಯು ಕರ್ನಾಟಕದ ಮೊದಲ ಸಾವಯವ ಮೊರಿಂಗಾ ಕಂಪನಿಯಾಗಿ ಪ್ರಮಾಣೀಕೃತಗೊಂಡಿದೆ. ಈ ಕಂಪನಿಯು ‘ಸಾವಯವ ಟೀ ಪುಡಿ’ಯನ್ನು ಸಹ ಮಾರುಕಟ್ಟೆಗೆ ತಂದಿದೆ.

ಸದ್ಯ ಈ ಕಂಪನಿಯ ಒಂದು ತಂಡದಿಂದ ಮಂಗಳೂರಿನ ಮೂಡುಬಿದ್ರೆಯಲ್ಲಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನಡೆಯುತ್ತಿರುವ 29ನೇ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ “ಆಳ್ವಾಸ್ ವಿರಾಸತ್” ನ ಕೃಷಿ ಮೇಳದಲ್ಲಿ ಮಳಿಗೆಯೊಂದು ಹಾಕಲ್ಪಟ್ಟಿದ್ದು, ನುಗ್ಗೆಯ ಸೊಪ್ಪು ಮತ್ತು ಎಣ್ಣೆಯಿಂದ ಜನರಿಗೆ ಸಹಾಯವಾಗುವಂತೆ ತಯರಾದ ಮಾತ್ರೆ, ಪುಡಿ, ಔಷಧಿ ಹಾಗೂ ಎಣ್ಣೆ ಒಂದು ಉತ್ತಮ ದರದಲ್ಲಿ ಮಾರಾಟವಾಗುತ್ತಿದೆ. ಈ ಉತ್ಪನ್ನಗಳು ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾ ವಯೋಮಾನದವರಿಗೂ ಸಹಾಯಕವಾಗುತ್ತದೆ. ಈ ಮಳಿಗೆಗೆ ಭೇಟಿ ನೀಡಿ ಇದರ ಉಪಯೋಗವನ್ನು ಪಡೆದುಕೊಳ್ಳುವುದರಿಂದ ನಿಮಲ್ಲಿರುವ ಕೆಲವು ಸಮಸ್ಯೆಗಳಿಗೆ ನಿವಾರಕವಾಗಲಿದೆ.