ಮಣಿಪಾಲ: ಮಾಹೆ ವತಿಯಿಂದ ಎಂ.ಸಿ.ಎನ್.ಎಸ್ ನ ಪ್ಲಾಟಿನಂ ಹಾಲ್ ನಲ್ಲಿ ಶನಿವಾರದಂದು ನಡೆದ ನಮಾಮಿ ಗಂಗೆ ಅರಿವು ಕಾರ್ಯಾಗಾರದಲ್ಲಿ ನದಿಯ ಪಾವಿತ್ರ್ಯತೆ, ಅವುಗಳ ಪ್ರಾಮುಖ್ಯತೆ, ಮನುಷ್ಯನ ಜೀವನದಲ್ಲಿ ನೀರಿನ ಪಾತ್ರ, ಹಿಂದಿನ ಕಾಲದಿಂದಲೂ ರಾಜ ಮಹಾರಾಜರುಗಳಿಂದ ಕೆರೆಗಳನ್ನು ಕಟ್ಟಿಸಿದ ಉದ್ದೇಶ ಇವೆಲ್ಲದರ ಬಗ್ಗೆ ಶಾಲಾ-ಕಾಲೇಜುಗಳ ಮಕ್ಕಳಿಗೆ ಅರಿವು ಮೂಡಿಸಲಾಯಿತು.
ಗಣ್ಯರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗಂಗಾನದಿಯ ಹುಟ್ಟು ಹಾಗೂ ಭಾರತದಲ್ಲಿ ಅದಕ್ಕೆ ಇರುವ ಮಹತ್ವದ ಬಗ್ಗೆ ತಿಳಿಸಲಾಯಿತು.