ಉಡುಪಿ: ಕಳೆದ ಕೆಲವು ದಿನಗಳ ಹಿಂದೆ ಬಸ್ಸ್ ಅಪಘಾತದಲ್ಲಿ ತನ್ನ ಬಲ ಕೈ ಕಳೆದುಕೊಂಡ ಉಡುಪಿ ತಾಲೂಕಿನ ಹಿರಿಯಡಕ ಅಂಜಾರು ಗ್ರಾಮದ ಬಾಕ್ಯಾರ್ ಕಟ್ಟ ನಿವಾಸಿ ಭಾಸ್ಕರ ಶೆಟ್ಟಿ ಹಾಗೂ ಗುಲಾಬಿ ದಂಪತಿಯ ಪುತ್ರ ಅಜಿತ್ ಶೆಟ್ಟಿ ಅವರಿಗೆ ನಮ ಬಿರುವೆರ್ ಹಿರಿಯಡ್ಕ ಸಂಘಟನೆಯ ವತಿಯಿಂದ ಸಹಾಯಧನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಸುಂದರ ಪೂಜಾರಿ ಗಂಪ, ಅಧ್ಯಕ್ಷ ಶೇಖರ ಪೂಜಾರಿ, ಪ್ರ. ಕಾರ್ಯದರ್ಶಿ ರವಿ ಎಸ್. ಪೂಜಾರಿ, ಕೋಶಾಧಿಕಾರಗಳಾದ ಪ್ರದೀಪ್ ಪೂಜಾರಿ, ವಿನುತ್ ಪೂಜಾರಿ, ಗೌರವ ಸಲಹೆಗಾರರಾದ ಅರುಣ್ ಕುಮಾರ್ ಜತ್ತನ್, ಸುಧಾಕರ ಪೂಜಾರಿ, ಸುಕೇಶ್ ಪೂಜಾರಿ, ಸಂತೋಷ ಪೂಜಾರಿ ಸದಸ್ಯರಾದ, ಸಂದೀಪ್ ಪೂಜಾರಿ, ಪ್ರತಾಪ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.